ಗ್ರಾಮಸ್ಥರ ಮನವೊಲಿಸಿ ರಸ್ತೆ ವಿಸ್ತರಣೆ ಮಾಡಿ

26 DEVDURGA 06
ದೇವದುರ್ಗ ಯಾದಗಿರಿ ಮುಖ್ಯರಸ್ತೆ ವಿಸ್ತರಣೆ ಹಾಗೂ ದುರಸ್ಥಿ ಮಾಡುವಂತೆ ಒತ್ತಾಯಿಸಿ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿತು. ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಉಪಾಧ್ಯಕ್ಷ ತಿಮ್ಮನಗೌಡ ಗೌರಂಪೇಟೆ, ಬಸವರಾಜಸ್ವಾಮಿ, ರಮೇಶ ಸಿಪ್ಪತಗೇರಾ, ಬಸನಗೌಡ ಹೊನ್ನಟಗಿ, ಸೂಗೂರೆಡ್ಡಿ ಇತರರಿದ್ದರು.
Published on

ದೇವದುರ್ಗ: ದೇವದುರ್ಗದಿಂದ ಗೂಗಲ್ ಬ್ರಿಡ್ಜ್ ಬ್ಯಾರೇಜ್ ಮೂಲಕ ಯಾದಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.

ದೇವದುರ್ಗ ಯಾದಗಿರಿ ರಸ್ತೆ ಪೂರ್ಣಗೊಂಡರೆ ಎರಡೂ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಅಲ್ಲದೆ ಸುತ್ತಿಬಳಸಿ ಓಡಾಡುವುದು ಕಡಿಮೆ ಆಗಲಿದ್ದು ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಆದರೆ, ಅಧಿಕಾರಿಗಳು ಕಾಮಗಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಪ್ರಭಾವಿ ವ್ಯಕ್ತಿಗಳ ಒತ್ತಡದಿಂದ ರಸ್ತೆ ವಿಸ್ತರಣೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನಮ್ಮ ಭಾಗದ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಕೂಡಲೇ ದೇವದುರ್ಗದಿಂದ ಗೂಗಲ್ ಬ್ರಿಡ್ಜ್ ಬ್ಯಾರೇಜ್ ಮೂಲಕ ಯಾದಗಿರಿ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಗ್ರಾಮಸ್ಥರ ಮನವೊಲಿಸಿ ರಸ್ತೆ ವಿಸ್ತರಣೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಉಪಾಧ್ಯಕ್ಷ ತಿಮ್ಮನಗೌಡ ಗೌರಂಪೇಟೆ, ಬಸವರಾಜಸ್ವಾಮಿ, ರಮೇಶ ಸಿಪ್ಪತಗೇರಾ, ಬಸನಗೌಡ ಹೊನ್ನಟಗಿ, ಸೂಗೂರೆಡ್ಡಿ, ಮಲ್ಲೇಶ ನಾಯಕ ಗೌರಂಪೇಟೆ, ಮಾರುತಿ ತಳವಾರದೊಡ್ಡಿ, ಶರಣುನಾಯಕ, ಚನ್ನಪ್ಪಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net