ರಾಜಧಾನಿ ಮಗ್ಗುಲಲ್ಲೇ ಜೋಡಿ ಕೊಲೆ; ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಶವದ ಪಕ್ಕದಲ್ಲೇ ಇತ್ತು ಮಹಿಳೆಯ ಮೃತದೇಹ..

Murder
Published on

ಆನೇಕಲ್: ರಾಜಧಾನಿ ಬೆಂಗಳೂರಿನ ಮಗ್ಗುಲಲ್ಲೇ ಜೋಡಿ ಕೊಲೆಯಾಗಿದ್ದು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರ ಶವದ ಬಳಿಯೇ ಮಹಿಳೆಯೊಬ್ಬರ ಮೃತದೇಹ ಕಂಡುಬಂದಿದೆ. ಪರಿಣಾಮವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರ ಸಿಟಿಯ ರಾಮಯ್ಯ ಬಡಾವಣೆಯಲ್ಲಿ ಈ ಶವಗಳು ಕಂಡುಬಂದಿವೆ. ಬ್ಯಾಗಡದೇನಹಳ್ಳಿಯ ಪಂಚಾಯತಿಯ ಮಾಜಿ ಅಧ್ಯಕ್ಷ ದಾಸ ಅಲಿಯಾಸ್ ನಾರಾಯಣ ಸ್ವಾಮಿ ಶವದ ಜೊತೆಗೆ 32 ವರ್ಷದ ಕಾವ್ಯ ಎಂಬ ಮಹಿಳೆಯ ಶವವೂ ಸಿಕ್ಕಿದೆ.

ಸಾವಿಗೀಡಾಗಿರುವ ಇಬ್ಬರೂ ಆನೇಕಲ್ ತಾಲೂಕಿನ ಚಿಕ್ಕಹಾಗಡೆ ಮೂಲದವರು ಎಂದು ತಿಳಿದುಬಂದಿದೆ. ಇಬ್ಬರ ಮಧ್ಯೆ ಅನೈತಿಕ ಸಂಬಂಧ ಇರಬಹುದು ಎಂದು ಅಂದಾಜಿಸಲಾಗಿದ್ದು, ಅದೇ ಕಾರಣಕ್ಕೆ ಯಾರೋ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಾವ್ಯ ಪತಿ ಮುತ್ತುರಾಜ್ ವಿರುದ್ಧ ಅತ್ಯಾಚಾರ ಹಾಗೂ ಕ್ರಿಮಿನಲ್ ಪ್ರಕರಣಗಳು ಇವೆ. ಈ ಸಂಜೆ ಮುತ್ತುರಾಜ್ ಮತ್ತು ತಂಡ ಸ್ಥಳಕ್ಕೆ ಬಂದಿದ್ದು ಆತನ ವಿರುದ್ಧ ಅನುಮಾನಗಳು ವ್ಯಕ್ತವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net