ಧಾರ್ಮಿಕ ಕ್ಷೇತ್ರಗಳಿಂದ ಗ್ರಾಮ ಅಭಿವೃದ್ಧಿ: ಮಾಜಿ ಸಚಿವ ಅಭಯಚಂದ್ರ ಜೈನ್ ಅಭಿಪ್ರಾಯ

Mul_religious field
Published on

ಮೂಲ್ಕಿ: ಧಾರ್ಮಿಕ ಕ್ಷೇತ್ರಗಳು ಬೆಳಗಿದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಪಾಕಶಾಲೆ ಶಿಲಾನ್ಯಾಸ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರದ ತಂತ್ರಿ ಶಿಬರೂರು ಗೋಪಾಲಕೃಷ್ಣ ಹಾಗೂ ಅರ್ಚಕ ಮಧುಸೂದನ ಆಚಾರ್ಯ ಪೌರೋಹಿತ್ಯದಲ್ಲಿ ಶಿಲಾನ್ಯಾಸ ನಡೆಯಿತು.

ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಭುವನಾಭಿರಾಮ ಉಡುಪ, ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್.ಪೂಜಾರಿ, ಮಾಜಿ ಅಧ್ಯಕ್ಷ ಹರಿದಾಸ್ ಭಟ್ ತೋಕೂರು, ಸದಸ್ಯರಾದ ಸಂಪತ್ ಶೆಟ್ಟಿ ತೋಕೂರುಗುತ್ತು, ಪಿ.ಸಿ.ಕೋಟ್ಯಾನ್, ಸವಿತಾ ಶರತ್ ಬೆಳ್ಳಾಯರು, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಪುರುಷೋತ್ತಮ ರಾವ್, ಅಶೋಕ್ ಕುಂದರ್, ವಿಶ್ವನಾಥ ತೋಕೂರು, ಮದ್ದೇರಿ ದೈವಸ್ಥಾನ ಅಧ್ಯಕ್ಷ ಪದ್ಮನಾಭ ಆಚಾರ್ಯ, ಹಳೆಯಂಗಡಿ ಬಿಲ್ಲವ ಸಂ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಉದ್ಯಮಿ ಪೃಥ್ವಿರಾಜ ಆಚಾರ್ಯ ಕಿನ್ನಿಗೋಳಿ ಮತ್ತಿತರರಿದ್ದರು.

ಗುರುರಾಜ್ ಎಸ್.ಪೂಜಾರಿ ಸ್ವಾಗತಿಸಿದರು. ಹೇಮನಾಥ ಅಮೀನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net