ಹಳ್ಳಿಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ

12ALD01
ಅಳವಂಡಿ ಗ್ರಾಪಂ ಕಟ್ಟಡದ ನವೀಕರಣ ಹಾಗೂ ನೂತನ ಸಭಾಭವನ ಉದ್ಘಾಟನೆ ಕಾರ್ಯಕ್ರದಲ್ಲಿ ತಹಸೀಲ್ದಾರ್ ವಿಠ್ಠಲ ಚೌಗಲೆ ಮಾತನಾಡಿದರು, ತಾಪಂ ಇಒ ದುಂಡೇಶ ತುರಾದಿ, ಪ್ರಮುಖರಾದ ಶಂಕ್ರಮ್ಮ, ಶಾರವ್ವ, ಕೊಟ್ರಪ್ಪ, ರಾಜೇಸಾಬ, ಬಸವರಾಜ ಇತರರು ಇದ್ದರು.
Published on

ಅಳವಂಡಿ: ಗ್ರಾಪಂ ಸದಸ್ಯರು ಸಮನ್ವಯತೆ ಹಾಗೂ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ತಹಸೀಲ್ದಾರ್ ವಿಠ್ಠಲ ಚೌಗಲೆ ತಿಳಿಸಿದರು.

ಗ್ರಾಮದ ಗ್ರಾಮ ಪಂಚಾಯಿತ ಕಟ್ಟಡದ ನವೀಕರಣ ಹಾಗೂ ನೂತನ ಸಭಾಭವನ ಉದ್ಘಾಟನೆಯ ಪೂಜಾ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಹಳ್ಳಿಗಳು ಅಭಿವೃದ್ಧಿಯಾಗಬೇಕು.

ಈ ಕಾರ್ಯಕ್ಕೆ ಸರ್ವರ ಸಹಕಾರ ಅಗತ್ಯ. ಗ್ರಾಪಂ ಅಧಿಕಾರಿಗಳು, ಸದಸ್ಯರು ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸಬೇಕು. ಕರ ವಸೂಲಿ, ಉದ್ಯಮಗಳಿಂದ ತೆರಿಗೆ ಸಂಗ್ರಹ ಮಾಡಿ ಅಭಿವೃದ್ಧಿಗೆ ಮುಂದಡಿ ಇಡಬೇಕು. ಸದಸ್ಯರು ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳ ಶಿಕ್ಷಣದ ಬಗ್ಗೆ ಪರಿಶೀಲಿಸಬೇಕು. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ತಾಪಂ ಇಒ ದುಂಡೇಶ ತುರಾದಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳನ್ನು ಗ್ರಾಪಂ ನೀಡಬೇಕು. ಶಿಕ್ಷಣ ಪಡೆದ ಮಕ್ಕಳು ದೇಶದ ಪ್ರಜ್ಞಾವಂತ ನಾಗರಿಕರಾಗಲಿದ್ದಾರೆ. ಇದರಿಂದ ದೇಶ ಅಭಿವೃದ್ಧಿ ಹೊಂದಲಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರವ್ವ ಇಳಿಗೇರ, ತಾಪಂ ಯೋಜನಾಧಿಕಾರಿ ರಾಜೇಸಾಬ ನದಾಫ್, ಪಿಡಿಒ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ ತಾಪಂ ನೌಕರ ಬಸವರಾಜ ಬಳಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net