

ತಲ್ಲೂರ: ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಜನರಿಗೆ ಮೂಲ ಸೌಕರ್ಯ ಒದಗಿಸಲು ಬದ್ಧವಾಗಿದ್ದು, ಹೆಚ್ಚುವರಿ ಅನುದಾನ ತಂದು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಗ್ರಾಪಂ ಅಧ್ಯೆ ಕವಿತಾ ಬಾಲರಡ್ಡಿ ಹೇಳಿದರು.
ಸಮೀಪದ ಜೀವಾಪುರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ ಎಂದರು.
ಪಿಡಿಒ ಎಚ್.ಕೆ.ಚೌರಡ್ಡಿ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು. ಮುಖಂಡರಾದ ವೆಂಕಣ್ಣ ಯರಡ್ಡಿ, ಗ್ರಾಪಂ ಸದಸ್ಯ ಶೆಟ್ಟೆಪ್ಪ ಮಾದರ, ಕಲ್ಮೇಶ ಬಾಲರಡ್ಡಿ, ಪುಟ್ಟು ಅರಳಿಕಟ್ಟಿ, ರಮೇಶ ನರಿ, ಶಾಶಪ್ಪ ಗೋಪಾಳಿ, ರಮೇಶ ಅರಳಿಕಟ್ಟಿ, ಕೃಷ್ಣ ಅರೆಬೆಂಚಿ, ಗಿರೀಶ ಯರಡ್ಡಿ, ಪವನ ಅರಳಿಕಟ್ಟಿ, ಲ$್ಮ್ಮಣ ಅರಳಿಕಟ್ಟಿ, ಬಸವರಾಜ ತಳವಾರ, ಸದಾಶಿವ ಗೋಪಾಳಿ, ಕನ್ನಮ್ಮ ಇತರರಿದ್ದರು.