ವಿಖ್ಯಾತಾನಂದ ಶ್ರೀ ಪೀಠಾರೋಹಣ ವಾರ್ಷಿಕೋತ್ಸವ

FotoJet (1)
Published on

ಕುದೂರು : ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಪೀಠಾರೋಹಣದ 3ನೇ ವಾರ್ಷಿಕೋತ್ಸವವು ಶ್ರೀಮಠದಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.

ಪೀಠಾರೋಹಣದ ವಾರ್ಷಿಕೋತ್ಸವ ಪ್ರಯುಕ್ತ ಸಮುದಾಯದ ಮುಖಂಡರು ಹಾಗೂ ಭಕ್ತರು ಶ್ರೀಗಳ ಪಾದಪೂಜೆ ಮಾಡಿ, ಗುರುಪೂಜೆ ಸಲ್ಲಿಸಿದರು. ಈ ವೇಳೆ ಸ್ವಾಮೀಜಿಗೆ ಬೆಳ್ಳಿ ಕಿರೀಟ ಹಾಗೂ ಬೆಳ್ಳಿ ಪಾದುಕೆಗಳನ್ನು ಭಕ್ತರು ಸಮರ್ಪಿಸಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ರೇಣುಕಾ ಯಲ್ಲಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ಜೆ.ಪಿ.ಸುಧಾಕರ್, ಚಲನಚಿತ್ರ ನಿರ್ಮಾಪಕ ಚಿನ್ನೇಗೌಡ, ಆರ್ಯ ಈಡಿಗ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಧರ್ಮ ವಿಜೇತ್, ಖಜಾಂಚಿ ಹರೀಶ್, ಆಡಳಿತಾಧಿಕಾರಿ ಸಂತೋಷ್ ಕುಮಾರ್, ಮೈಸೂರು ಜಿಲ್ಲಾ ಸಂಘದ ಶ್ರೀಕಾಂತ್, ನಿರ್ದೇಶಕ ಸಂಪತ್, ತಾಲೂಕು ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ಕುದೂರು ವೆಂಕಟೇಶ್, ರಾಜ್ಯ ನಿರ್ದೇಶಕರಾದ ದುಶ್ಯಂತ್, ಪ್ರಕಾಶ್, ಟಿ.ವಾಸನ್, ಪ್ರಧಾನ ಅರ್ಚಕ ಗೋಪಿ ಭಟ್, ಶಶಾಂಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net