

ಬಸವರಾಜ ಪಾಟೀಲ್ ಸೇಡಂ ಮಾಹಿತಿ | ಸೇಡಂನಲ್ಲಿ ಪೂರ್ವಭಾವಿ ಸಭೆ
ವಿಜಯವಾಣಿ ಸುದ್ದಿಜಾಲ ಸೇಡಂ
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷರೂ ಆದ ಶ್ರೀ ಸದಾಶಿವ ಸ್ವಾಮಿಗಳು ಕೈಗೊಂಡಿರುವ ವಿಕಾಸ ಪಥ ರಥ ಯಾತ್ರೆಯೂ ಸೆ.೧೧ರಂದು ಪಟ್ಟಣ ಪ್ರವೇಶಿಸಲಿದ್ದು, ಸಾವಿರಾರು ಜನ ಸೇರಿ ಅದ್ದೂರಿಯಾಗಿ ಸ್ವಾಗತಿಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಸಂರಕ್ಷಕ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ೨೦೨೫ರ ಫೆಬ್ರವರಿಯಲ್ಲಿ ನಡೆಯಲಿರುವ ಸ್ವರ್ಣ ಜಯಂತಿ, ಭಾರತ ವಿಕಾಸ ಸಂಗಮದ ಪೂರ್ವಭಾವಿಯಾಗಿ ಶ್ರೀ ಸದಾಶಿವ ಸ್ವಾಮಿಗಳು ಕಲ್ಯಾಣ ಕರ್ನಾಟಕ ಭಾಗದ ೭ ಜಿಲ್ಲೆಗಳಲ್ಲಿ, ೫ ಸಾವಿರ ಕಿಮೀ ಸಂಚರಿಸುವ ಮೂಲಕ ಸುಮಾರು ೬೦ ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಯಾತ್ರೆ ಆರಂಭಗೊAಡಿದ್ದು, ಸೆ.೧೧ರಂದು ಸೇಡಂನಲ್ಲಿ ಸಮಾರೋಪಗೊಳ್ಳಲಿದೆ. ಅದಕ್ಕಾಗಿ ತಾಲೂಕಿನ ಎಲ್ಲರೂ ಸೇರಿ ಇದೊಂದು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡುವುದು ಅವಶ್ಯವಾಗಿದೆ ಎಂದರು.
ಸೆ.೧೧ರಂದು ಮಧ್ಯಾಹ್ನ ೩ಕ್ಕೆ ಡೊಳ್ಳು, ಹಲಗೆ ಸೇರಿ ವಿವಿಧ ವಾಧ್ಯಗಳ ಜತೆಗೆ ಮಹಿಳೆಯರು ಕುಂಭ, ಕಳಸದೊಂದಿಗೆ ಬಸವೇಶ್ವರ ವೃತದಿಂದ ಕೊತ್ತಲ ಬಸವೇಶ್ವರ ದೇವಾಲಯದವರೆಗೆ ಭವ್ಯ ಮೆರವಣಿಗೆ ಮೂಲಕ ಶ್ರೀಗಳನ್ನು ಕರೆತರಲಾಗುವುದು. ನಂತರ ಶ್ರೀಗಳಿಂದ ಯಾತ್ರೆಯ ಅನುಭವದ ನುಡಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸೋಣ ಎಂದು ತಿಳಿಸಿದರು.
ಕೊತ್ತಲ ಬಸವೇಶ್ವರ ದೇವಾಲಯದ ಪಂಚಮAಡಳಿಯ ಸಿದ್ದಪ್ಪ ತಳ್ಳಳ್ಳಿ, ಶಿಕ್ಷಣ ಸಮಿತಿಯ ಕಾರ್ಯದರ್ಶಿ ಅನುರಾಧ ಪಾಟೀಲ್, ವಿಕಾಸ ಅಕಾಡೆಮಿಯ ಸಂಯೋಜಕ ಶಂಕರ ಸುಲೆಗಾಂವ್ ಇತರರಿದ್ದರು.