ವಿಜೃಂಭಣೆಯ ತೋಪಮ್ಮ ತಾಯಿಯ ಜಾತ್ರಾ ಮಹೋತ್ಸವ

ವಿಜೃಂಭಣೆಯ ತೋಪಮ್ಮ ತಾಯಿಯ ಜಾತ್ರಾ ಮಹೋತ್ಸವ
Published on

ಕೆ.ಆರ್.ನಗರ: ತಾಲೂಕಿನಲ್ಲಿ ಪ್ರೇಮಿಗಳ ದೇವತೆ ಎಂದೇ ಹೆಸರುವಾಸಿಯಾಗಿರುವ ಶ್ರೀ ಆದಿಶಕ್ತಿ ತೋಪಮ್ಮ ತಾಯಿಯ 34ನೇ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ಜಾತ್ರೆಯ ಅಂಗವಾಗಿ ಬೆಳಗ್ಗೆ 4.30ರಿಂದ ರುದ್ರಾಭಿಷೇಕ, ಮಹಾಮಂಗಳಾರತಿ ಮತ್ತು ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವಿಗೆ ಹಣ್ಣು, ಕಾಯಿ ಅರ್ಪಿಸಿದರು. ಜಾತ್ರಾ ಮಹೋತ್ಸವ ಹಿನ್ನೆಲೆ ದೇವಾಲಯವನ್ನು ಹೂವು, ತಳಿರು-ತೋರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಸುತ್ತಲಿನ 9 ಗ್ರಾಮಸ್ಥರು ಜಾತ್ರಾ ಉಸ್ತುವಾರಿ ವಹಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಶಾಸಕ ಡಿ.ರವಿಶಂಕರ್, ಶ್ರೀ ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಇತರರು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net