ಸಾಧನೆಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ದಾರಿದೀಪ

Vidyarthi Mitra
Published on

ಎಸ್​ಎಸ್​ಎಲ್​ಸಿ, ಪಿಯುಸಿ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿ-ಅಭ್ಯರ್ಥಿಗಳ ಪಾಲಿನ ದಾರಿದೀಪವಾಗಿರುವ ‘ವಿಜಯವಾಣಿ ವಿದ್ಯಾರ್ಥಿಮಿತ್ರ’, ಪ್ರತಿ ವರ್ಷದಂತೆ ಈ ಬಾರಿಯೂ ದ್ವಿತೀಯ ಪಿಯುಸಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ನೆರವಾಗಿದೆ. ತಮ್ಮ ಈ ಸಾಧನೆಗೆ ಸಹಕಾರಿಯಾದ ‘ವಿದ್ಯಾರ್ಥಿ ಮಿತ್ರ’ನಿಗೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದ್ದಾರೆ.

ನಾನು ಗ್ರಂಥಾಲಯಕ್ಕೆ ಹೋದಾಗಲೆಲ್ಲ ವಿಜಯವಾಣಿಯ ‘ವಿದ್ಯಾರ್ಥಿ ಮಿತ್ರ’ ಓದುತ್ತಿದ್ದೆ, ರ್ಯಾಂಕ್ ಬರಲು ಇದೂ ಒಂದು ಕಾರಣ. ನಾವೇನೂ ಸ್ಥಿತಿವಂತರಲ್ಲ. ಬೋಧಕರು ನೀಡುತ್ತಿದ್ದ ಮಾರ್ಗದರ್ಶನ ರ್ಯಾಂಕ್ ಬರಲು ಬಹಳಷ್ಟು ಸಹಕಾರಿ ಆಯಿತು. ಉನ್ನತ ವಿದ್ಯಾಭ್ಯಾಸದ ಗುರಿ ಇದೆ, ಈ ಮಧ್ಯೆ ಬಡತನವೂ ಇದೆ. | ಕರೇಗೌಡ ದಾಸನಗೌಡ ಇಂದು ಪಿಯು ಕಾಲೇಜು, ಕೊಟ್ಟೂರು (ಪ್ರಥಮ ರ್ಯಾಂಕ್, ಕಲಾ ವಿಭಾಗ, 594 ಅಂಕ) ಮನೆಯಲ್ಲಿ ಬಡತನ ವಿದ್ದರೂ ತಾಯಿ ಕೂಲಿ ಮಾಡಿ ಶಿಕ್ಷಣ ಕೊಡಿಸಿದ್ದಾಳೆ. ಅವರ ಆಸೆಯಂತೆ ಪಾಠವನ್ನು ಶ್ರದ್ಧೆಯಿಂದ ಆಲಿಸಿ, ವಿಜಯವಾಣಿ ವಿದ್ಯಾರ್ಥಿ ಮಿತ್ರವನ್ನು ನಿತ್ಯ ಓದಿ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದಿದ್ದೇನೆ. | ಯಶೋಧಾ ವಾಘಮೋಡೆ ಕಲಾ ವಿಭಾಗದಲ್ಲಿ 568 ಅಂಕ, ಸಂತಪುರ ಸಿದ್ಧರಾಮೇಶ್ವರ ಕಲಾ ಕಾಲೇಜು, ಔರಾದ್

ಕರೇಗೌಡರ ಕಲೆಗೆ ನೆರವಾದ ವಿದ್ಯಾರ್ಥಿ ಮಿತ್ರ ಬಳ್ಳಾರಿ: ವಿಜಯವಾಣಿ ‘ವಿದ್ಯಾರ್ಥಿ ಮಿತ್ರ’ದ ಜತೆಗೆ ಬೋಧಕರ ಸಹಕಾರದಿಂದ 594 ಅಂಕಗಳೊಂದಿಗೆ ಪಿಯು ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಜಿಲ್ಲೆಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಕರೇಗೌಡ ದಾಸನಗೌಡ. ಇವರ ತಂದೆ ಡಿ. ಕೊಟ್ರೇಶ, ತಾಯಿ ಡಿ. ಶಾಂತಮ್ಮ ಕೃಷಿಕರು. ಹೂವಿನ ಹಡಗಲಿಯ ಮಹಾಜನದಹಳ್ಳಿಯಲ್ಲಿ 3 ಎಕರೆ ಜಮೀನಿದ್ದು, ಮೆಕ್ಕೆಜೋಳ-ಸೂರ್ಯಕಾಂತಿ ಬೆಳೆಯುತ್ತಾರೆ. ರಜೆಯಲ್ಲಿ ಕರೇಗೌಡ ಕೂಡ ಕೃಷಿ ಚಟುವಟಿಕೆಯಲ್ಲಿ ತಂದೆ-ತಾಯಿಗೆ ನೆರವಾಗುತ್ತಾರೆ. ಇವರ ಅಕ್ಕ ಶ್ವೇತಾ ಕೊಟ್ಟೂರಿನ ತಹಸಿಲ್ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾದ್ದರಿಂದ ಕೊಟ್ಟೂರಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಕರೆಸ್ಪಾಂಡೆನ್ಸ್ ಮೂಲಕ ಬಿಎ ಪ್ರವೇಶ ಪಡೆದು ಕೆಎಎಸ್ ಪರೀಕ್ಷೆ ಬರೆಯುವ ಗುರಿ ಹೊಂದಿದ್ದಾರೆ. ಕಾಲೇಜಿಗೆ ಹೋದರೆ ಕೆಎಎಸ್ ಪರೀಕ್ಷೆ ಬಗ್ಗೆ ಗಮನಹರಿಸಲು ಆಗುವುದಿಲ್ಲ ಎಂಬುದು ಇವರ ಅಭಿಪ್ರಾಯ.

ಶಿಕ್ಷಕರ ಪ್ರೋತ್ಸಾಹ ನನ್ನ ಕಲಿಕೆಗೆ ಅನುಕೂಲ ಆಯಿತು. ನಿತ್ಯ ವಿಜಯವಾಣಿ ವಿದ್ಯಾರ್ಥಿಮಿತ್ರ ಓದಿದ್ದರಿಂದ ಪರೀಕ್ಷೆಯಲ್ಲಿ ಇಷ್ಟು ಅಂಕ ಗಳಿಸಲು ಸಹಕಾರಿಯಾಯಿತು. ವಿಜಯವಾಣಿಗೆ ನನ್ನ ಅನಂತಾನಂತ ಧನ್ಯವಾದ. | ಜ್ಯೊತಿ ಬಸವರಾಜ ಬಾಲನಗೌಡ್ರ ಕಲಾ ವಿಭಾಗದಲ್ಲಿ 89.67 ಅಂಕ, ಕಲ್ಮೇಶ್ವರ ಕಾಲೇಜ್ ವಿದ್ಯಾರ್ಥಿನಿ, ಹೊಳೆಆಲೂರು, ಗದಗ ತರಗತಿಯಲ್ಲಿನ ಪಾಠದ ಜತೆಗೆ ವಿದ್ಯಾರ್ಥಿಮಿತ್ರ ಶಿಕ್ಷಕರಂತೆ ಮಾರ್ಗದರ್ಶನ ನೀಡಿದ್ದು, ಉತ್ತಮ ಫಲಿತಾಂಶ ಬರಲು ಅಪಾರ ಕೊಡುಗೆ ನೀಡಿದೆ. | ಮೊಹಮ್ಮದ್ ಮುಸಾದಿಕ್ ಮೊಗಲ್ ವಿಜ್ಞಾನ ವಿಭಾಗದಲ್ಲಿ ಶೇ. 95.7 ಅಂಕ, ಧಾರವಾಡದ ಐಸಿಎಸ್ ಮಹೇಶ ಕಾಲೇಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net