ಉಜಿರೆ ಅಮೃತ್ ಸಿಲ್ಕ್‌ನಲ್ಲಿ ವಿಜಯೋತ್ಸವ : ವಿಜಯವಾಣಿ ಸಹಯೋಗ : 2500ಕ್ಕೂ ಅಧಿಕ ಬಹುಮಾನ ಗಳಿಸುವ ಅವಕಾಶ

amruth
Published on

ಬೆಳ್ತಂಗಡಿ: ವಿಜಯವಾಣಿ ಓದುಗರ, ಜಾಹೀರಾತುದಾರರ ಪ್ರೋತ್ಸ್ಸಾಹದಿಂದ ನಂ.1 ದಿನಪತ್ರಿಕೆಯಾಗಿ ಹೊರಹೊಮ್ಮಿದ್ದು, ಓದುಗರ ಮತ್ತು ಉದ್ದಿಮೆದಾರರ ಅನುಕೂಲಕ್ಕಾಗಿ ನವರಾತ್ರಿ, ದೀಪಾವಳಿ ಹಬ್ಬವನ್ನು ಸಂಭ್ರಮಿಸಲು ವಿಜಯವಾಣಿ ವಿಜಯೋತ್ಸವ ಆಚರಿಸುತ್ತಾ ಬಂದಿದೆ. ಪ್ರತಿ 2 ಸಾವಿರ ರೂ. ಮೇಲ್ಪಟ್ಟ ಖರೀದಿಯ ಒಂದು ಬಿಲ್‌ಗೆ ಅದೃಷ್ಟ ಕೂಪನ್ ನೀಡಲಾಗುತ್ತಿದ್ದು, ಕಾರು, ಬೈಕ್ ಇನ್ನಿತರ ಬಂಪರ್ ಬಹುಮಾನ ಸಹಿತ 2024 ಬಹುಮಾನ ಗೆಲ್ಲುವ ಅವಕಾಶವಿದೆ. ಇದೀಗ ಉಜಿರೆ ಅಮೃತ್ ಸಿಲ್ಕ್, ಟೆಕ್ಸ್‌ಟೈಲ್ಸ್ ರೆಡಿಮೇಡ್ಸ್‌ನಲ್ಲಿ ವಿಜಯವಾಣಿ ವಿಜಯೋತ್ಸವ ಸಂಭ್ರಮ ನಡೆಯುತ್ತಿದೆ.

ಉಜಿರೆ ಹೃದಯಭಾಗದಲ್ಲಿ ಹವಾನಿಯಂತ್ರಿತ ವಿಶಾಲ ಮಳಿಗೆ ಹೊಂದಿ ಕಳೆದ 19 ವರ್ಷಗಳಿಂದ ಗ್ರಾಹಕರ ಪ್ರೀತಿಪಾತ್ರವಾದ ಸಂಸ್ಥೆ ಅಮೃತ್ ಸಿಲ್ಕ್. ಸಿಬ್ಬಂದಿಯ ನಗುಮೊಗದ ಸೇವೆಯೊಂದಿಗೆ ಗ್ರಾಹಕರಿಗೆ ಅನುಕೂಲಕ್ಕೆ ತಕ್ಕಂತೆ ಪ್ರಸಿದ್ಧ ಕಂಪನಿಗಳ ಬಟ್ಟೆಗಳನ್ನು ಆಯ್ಕೆ ಮಾಡುವ ಅವಕಾಶವಿದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆಯಿದ್ದು, ಗ್ರಾಹಕರು ವಿಜಯವಾಣಿ ವಿಜಯೋತ್ಸವದಲ್ಲಿ ಭಾಗಿಯಾಗಿ ಬಂಪರ್ ಬಹುಮಾನ ತಮ್ಮದಾಗಿಸಿಕೊಳ್ಳಬಹುದು. ಲೂಯಿಸ್ ಫಿಲಿಪ್, ಸಿಯರಾನ್, ರಾಮ್ರಾಜ್, ಕ್ರೊಕೊಡೈಲ್ ಇನ್ನಿತರ ಪ್ರಸಿದ್ಧ ಕಂಪನಿಗಳ ಬಟ್ಟೆಬರೆ ಖರೀದಿಸಬಹುದು. ಮದುವೆ ಸೀರೆಗಳಿಗೆ ಇಲ್ಲಿ ವಿಶೇಷ ರಿಯಾಯಿತಿ ದರವಿದೆ.

ವಿಜಯವಾಣಿ ವಿಜಯೋತ್ಸವದಲ್ಲಿ ಹ್ಯಾಚ್‌ಬ್ಯಾಕ್ ಕಾರು 7, ದ್ವಿಚಕ್ರ ವಾಹನ 10, 32 ಇಂಚಿನ ಎಲ್‌ಇಡಿ ಟಿವಿ 10, ರೆಫ್ರಿಜರೇಟರ್ 10, ವಾಶಿಂಗ್ ಮಷಿನ್ 10, 1 ಗ್ರಾಂ ಚಿನ್ನದ ನಾಣ್ಯ 140, ಸೇಫ್ ಲಾಕರ್ 10, ವೆಟ್ ಗ್ರೈಂಡರ್ 20, 20 ಗ್ರಾಂ ಬೆಳ್ಳಿ ನಾಣ್ಯ 223, ಮಿಕ್ಸರ್ 150, ಟ್ರಾಲಿಬ್ಯಾಗ್ 20, ಎಲೆಕ್ಟ್ರಿಕ್ ಕೆಟಲ್ 350, ಸ್ಮಾರ್ಟ್ ವಾಚ್ 30, ಇಂಡಕ್ಷನ್ ಸ್ಟವ್ 90, ಹಾಟ್ ಫ್ಲಾಸ್ಕ್ 300, ಪ್ರೆಷರ್ ಕುಕ್ಕರ್ 400, ಪೆಡೆಸ್ಟಲ್ ಪ್ಯಾನ್ 260, ಕಾಪರ್ ಬಾಟಲ್ 470 ಸೇರಿ 2500ಕ್ಕೂ ಅಧಿಕ ಬಹುಮಾನಗಳು ಗ್ರಾಹಕರಿಗೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net