ವಿಜಯವಾಣಿ ಹೊರತಂದ 'ಸಿದ್ಧಗಂಗೆಯ ದೇವರು' ಪುರವಣಿ ಬಿಡುಗಡೆ

vijayavani siddagange
Published on

ತುಮಕೂರು: ತ್ರಿವಿಧ ದಾಸೋಹಿ, ಮಹಾಶಿವಯೋಗಿ ಡಾ.ಶಿವಕುಮಾರ ಶ್ರೀಗಳ ದ್ವಿತೀಯ ಪುಣ್ಯ ಸಂಸ್ಮರಣೋತ್ಸವ ಪ್ರಯುಕ್ತ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ 'ಸಿದ್ಧಗಂಗೆಯ ದೇವರು' ಶೀರ್ಷಿಕೆಯಡಿ 48 ಪುಟಗಳ ವಿಶೇಷ ಪುರವಣಿಯನ್ನು ಹೊರತಂದಿದೆ.

ಲಕ್ಷಾಂತರ ಬಡಮಕ್ಕಳ ಅನ್ನ, ಜ್ಞಾನದ ಹಸಿವು ನೀಗಿಸಿ ಆಸ್ರಯ ಕೊಟ್ಟು ಬದುಕು ರೂಪಿಸಿದ ಡಾ.ಶಿವಕುಮಾರ ಶ್ರೀಗಳು ಲಿಂಗೈಕ್ಯರಾಗಿ ಇಂದಿಗೆ 2 ವರ್ಷ. ಗುರುವಾರ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಶಿವಕುಮಾರ ಶ್ರೀಗಳ ದ್ವಿತೀಯ ಪುಣ್ಯ ಸಂಸ್ಮರಣೋತ್ಸವ ಸಮಾರಂಭದಲ್ಲಿ ವಿಜಯವಾಣಿ ಹೊರತಂದ 'ಸಿದ್ಧಗಂಗೆಯ ದೇವರು' ಪುರವಣಿಯನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಿದರು. ಸಿದ್ದಲಿಂಗ ಶ್ರೀಗಳು, ದೇಗುಲಮಠದ ಶ್ರೀಗಳು, ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಉಪಸ್ಥಿತರಿದ್ದರು. ಇದನ್ನೂ ಓದಿರಿ ಸಿದ್ಧಗಂಗಾ ಮಠದಲ್ಲಿ ಮಹತ್ವದ ನಿರ್ಧಾರ ಘೋಷಿಸಿದ ಸಿಎಂ ಯಡಿಯೂರಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net