ಬಸ್​ನಲ್ಲಿ ಹಾಡಹಗಲೇ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ಕಾಮುಕ, ಸ್ಥಳದಲ್ಲೇ ಫೋಟೋ ಕ್ಲಿಕ್ಕಿಸಿದ ದಿಟ್ಟೆ ಮಾಡಿದ್ದೇನು?

police case
Published on

ಮಂಗಳೂರು: ಬಸ್​ನಲ್ಲಿ ಕಾಮುಕನೊಬ್ಬ ಹಾಡಹಗಲೇ ಯುವತಿಗೆ ಕಿರುಕುಳ ನೀಡಿದ್ದು, ರಕ್ಷಣೆಗಾಗಿ ಯುವತಿ ಚೀರಾಡಿದರೂ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ! ಕೂಡಲೇ ಆ ಬಸ್​ನಿಂದ ಇಳಿದು ಮತ್ತೊಂದು ಬಸ್​ನಲ್ಲಿ ಹಿಂಬಾಲಿಸಿಕೊಂಡು ಬಂದವ ಮತ್ತೆ ಆಕೆಯೊದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆ ವೇಳೆ ಆತನ ಫೊಟೋಗಳನ್ನು ತೆಗೆದ ಸಂತ್ರಸ್ತ ಯುವತಿ, ಇನ್​ಸ್ಟಾಗ್ರಾಂನಲ್ಲಿ ಹಾಕಿ ಆ ಘಟನೆ ಬಗ್ಗೆ ವಿವರಿಸಿದ್ದಾರೆ.

ಯುವತಿಯ ಪೋಸ್ಟ್ ಆಧಾರದ ಮೇರೆಗೆ ಕಾಸರಗೋಡು ನಿವಾಸಿ ಹುಸೇನ್ (41) ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಜ.14 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಈ ಘಟನೆ ಸಂಭವಿಸಿದೆ. ದೇರಳಕಟ್ಟೆ-ಮಂಗಳೂರು ಮಾರ್ಗದ ಖಾಸಗಿ ಬಸ್​ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು. ಆಕೆಯ ಪಕ್ಕದಲ್ಲೇ ಕುಳಿತುಕೊಂಡ ಕಾಮುಕ, ಯುವತಿಗೆ ದೈಹಿಕ ಕಿರುಕುಳ ನೀಡಿದ್ದಾನೆ. ಯುವತಿ ವಿರೋಧ ವ್ಯಕ್ತಪಡಿಸಿದ ಮೇಲೆ ಬಸ್​ನಿಂದ ಕೆಳಗಿಳಿದ ಆರೋಪಿ, ಮತ್ತೊಂದು ಬಸ್​ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಮತ್ತೆ ಕಿರುಕುಳ ಮತ್ತೆ ಯುವತಿ ಪಕ್ಕದಲ್ಲೇ ಕೂತು ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನೂ ಓದಿರಿ ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಈ ವೇಳೆ ಕಾಮುಕನ ಫೋಟೋ ತೆಗೆದು ವೈರಲ್ ಮಾಡೋದಾಗಿ ಎಚ್ಚರಿಸಿದ ಯುವತಿ, ಮೊಬೈಲ್​ ಕ್ಯಾಮರಾ ಆನ್​ ಮಾಡುತ್ತಿದ್ದಂತೆ ಫೋಟೋಗೆ ಫೋಸ್ ಕೊಟ್ಟಿದ್ದ. ಆರೋಪಿಯ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ವಿವರ ಸಹಿತ ಯುವತಿ ಹಾಕಿದ್ದಳು. ಇದನ್ನು ನೋಡಿದ ಪೊಲೀಸರು ಕಾಮುಕನನ್ನು ಬುಧವಾರ ಬಂಧಿಸಿದ್ದಾರೆ.

ಯುವತಿಯ ದಿಟ್ಟ ಕ್ರಮಕ್ಕೆ ಮಂಗಳೂರು ನಗರ ಪೊಲೀಸ್​ ಕಮಿಷನರ್ ಎನ್. ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net