ಪತ್ರಕರ್ತ ವಿನಯ ಹುರಳಿಕೊಪ್ಪಿ ನಿಧನ

27-hvr-04 vinaya huralikoppi
Published on

ಶಿಗ್ಗಾಂವಿ: ವಿಜಯವಾಣಿ ಪತ್ರಿಕೆಯ ತಾಲೂಕು ವರದಿಗಾರ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪಟ್ಟಣದ ಹಳೆಪೇಟೆ ನಿವಾಸಿ ವಿನಯ ವಾಸುದೇವ ಹುರಳಿಕೊಪ್ಪಿ (41) ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನ ಹೊಂದಿದರು.

ಅವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧುಗಳಿದ್ದಾರೆ.

ಕಳೆದ 8 ವರ್ಷಗಳಿಂದ ವಿಜಯವಾಣಿ ಪತ್ರಿಕೆಯ ಶಿಗ್ಗಾಂವಿ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ವಿನಯ ಅವರು ಮಾನವೀಯ ಹಾಗೂ ನೈಜ ವರದಿಗಾರಿಕೆಯಲ್ಲಿ ಹೆಸರು ಗಳಿಸಿದ್ದರು. ಅವರ ಅಂತ್ಯಸಂಸ್ಕಾರ ಸೋಮವಾರ ಬೆಳಗಿನ ಜಾವ ನಡೆಸಲಾಯಿತು.

ವಿನಯ ಅವರ ನಿಧನಕ್ಕೆ ಪತ್ರಿಕೆಯ ಸಂಪಾದಕ ಕೆ.ಎನ್. ಚನ್ನೇಗೌಡ, ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮೋಹನ ಹೆಗಡೆ ಹಾಗೂ ವಿಜಯವಾಣಿಯ ಸಮಸ್ತ ಬಳಗದವರು ತೀವ್ರ ಸಂತಾಪ ಸೂಚಿಸಿ ಅವರ ನಿಸ್ಪೃಹ ವರದಿಗಾರಿಕೆಯನ್ನು ಸ್ಮರಿಸಿದ್ದಾರೆ.

ಅಂತ್ಯಸಂಸ್ಕಾರದ ವೇಳೆ ವಿಜಯವಾಣಿ ಜಿಲ್ಲಾ ವರದಿಗಾರ ಪರಶುರಾಮ ಕೆರಿ, ದಿಗ್ವಿಜಯ ವರದಿಗಾರ ಕುಮಾರಯ್ಯ ಚಿಕ್ಕಮಠ, ಬಂಕಾಪುರ ವರದಿಗಾರ ಗೌಡಪ್ಪ ಬನ್ನೆ, ಜಾಹೀರಾತು ವಿಭಾಗದ ಸಿದ್ದು ಹಿರೇಮಠ, ಕೊಟ್ರೇಶ ಅದ್ವಾನಿಮಠ ಹಾಗೂ ವಿನಯ ಅವರ ಆತ್ಮೀಯ ಗೆಳೆಯರು, ಪತ್ರಿಕಾ ಮಿತ್ರರು, ಸಂಬಂಧಿಕರು ಉಪಸ್ಥಿತರಿದ್ದರು.

ಬೊಮ್ಮಾಯಿ ಸಂತಾಪ: ಪತ್ರಕರ್ತ ವಿನಯ ಹುರಳಿಕೊಪ್ಪಿ ಅವರ ನಿಧನಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದು, ವಿನಯ ಅವರ ನಿಧನ ಅತೀವ ದುಃಖ ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ಸೈಯ್ಯದ ಅಜಂಫೀರ ಖಾದ್ರಿ, ಶಿವಾನಂದ ಮ್ಯಾಗೇರಿ, ಎಸ್.ಎಸ್. ಶಿವಳ್ಳಿ ಸೇರಿ ಅನೇಕ ಗಣ್ಯರು, ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net