ಟಿ.ದಾಸರಹಳ್ಳಿ ಶಾರದಾ ವಿದ್ಯಾಮಂದಿರದ ಸಾಧಕ ವಿದ್ಯಾರ್ಥಿಗಳಿಗೆ ವಿಜಯವಾಣಿ ಪ್ರತಿಭಾ ಪುರಸ್ಕಾರ

vijayavani
Published on

ಬೆಂಗಳೂರು: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಟಿ.ದಾಸರಹಳ್ಳಿ ತೆಂಗಿನತೋಟದ ರಸ್ತೆಯಲ್ಲಿರುವ ಶ್ರೀಶಾರದಾ ವಿದ್ಯಾ ಮಂದಿರದ ವಿದ್ಯಾರ್ಥಿಗಳಿಗೆ ವಿಜಯವಾಣಿ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಕೆ.ವೇಣುಗೋಪಾಲ್, ನಮ್ಮ ಶಾಲೆಯಲ್ಲಿ ಕೇವಲ ಪಠ್ಯಪುಸ್ತಕದ ಜ್ಞಾನವನ್ನು ಮಾತ್ರವಲ್ಲದೆ ಸಾಮಾನ್ಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಕೇವಲ ಪರೀಕ್ಷಾ ದೃಷ್ಟಿಯನ್ನಷ್ಟೇ ಗಮನಿಸದೆ ವಿದ್ಯಾರ್ಥಿಯ ವ್ಯಕ್ತಿತ್ವ ಮತ್ತು ಬದುಕನ್ನು ರೂಪಿಸಲು ನಮ್ಮ ಶಿಕ್ಷಕರು ಶ್ರಮವಹಿಸುತ್ತಾರೆ. ಪ್ರತಿ ವರ್ಷ ನಮ್ಮ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಲಿತಾಂಶವನ್ನು ಪಡೆಯುತ್ತಿದ್ದು, ಈ ಶ್ರೇಯಸ್ಸಿಗೆ ನಮ್ಮ ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ಶಿಸ್ತು ಮತ್ತು ಪಾಲಕರ ಬೆಂಬಲ ಕಾರಣವಾಗಿದೆ. ಎಲ್ಲ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಪ್ರಶಸ್ತಿ ಪಡೆಯುವಂತಾಗಬೇಕು. ಆ ಮೂಲಕ ನಿಮ್ಮ ಮೇಲೆ ಭರವಸೆ ಇಟ್ಟುಕೊಂಡಿರುವ ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಶಾಲೆಗೆ ಉತ್ತಮ ಹೆಸರು ತರುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶಪಾಲರಾದ ಶೇಷಾದ್ರಿ, ವಿಜಯವಾಣಿ ಪ್ರಸರಣ ವಿಭಾಗದ ಜಿ.ಎಂ. ವಿದ್ಯಾಧರ ಪೂಜಾರ, ವ್ಯವಸ್ಥಾಪಕರಾದ ನಾಗರಾಜ ನಂದಿಹಳ್ಳಿ, ಪ್ರತಿನಿಧಿ ಎಂ.ಪ್ರಕಾಶ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.

"ನಮ್ಮ ವಿದ್ಯಾರ್ಥಿಗಳ ಸಮರ್ಪಣೆ ಹಾಗೂ ಶ್ರೇಷ್ಠತೆ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಅವರ ಕಠಿಣ ಪರಿಶ್ರಮದಿಂದ ಶಾಲೆಗೆ ಶೇ.100 ಲಿತಾಂಶ ಬಂದಿದೆ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿದ್ದಕ್ಕಾಗಿ ವಿಜಯವಾಣಿಗೆ ಧನ್ಯವಾದಗಳು "

-ಡಾ.ಕೆ.ವೇಣುಗೋಪಾಲ್, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ

" ಈ ಶಾಲೆಯಲ್ಲಿ ಕಡಿಮೆ ಶುಲ್ಕ ಪಡೆದು, ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಇಂದಿನ ಲಿತಾಂಶಕ್ಕೆ ಶಿಕ್ಷಕರ ಶ್ರಮ ಕಾರಣ. ಆ ಕಾರಣಕ್ಕೆ ಎಲ್ಲ ಪೋಷಕರಿಗೆ ಶಾಲೆಯ ಬಗ್ಗೆ ಗೌರವವಿದೆ."

- ಹೇಮ, ಪೋಷಕರು

"ನಾನು ಉತ್ತಮ ಲಿತಾಂಶ ಪಡೆಯಲು ಶಾಲೆಯ ಆಡಳಿತ ಮಂಡಳಿಯ ಮಾರ್ಗದರ್ಶನ, ಶಿಕ್ಷಕರ ಸಹಕಾರ ಕಾರಣ. ಮುಂದಿನ ಬಾರಿ ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದು ಶಾಲೆಗೆ ಕೀರ್ತಿ ತರುವಂತಾಗಲಿ. "

- ಸಂಜನಾ ಆರ್, ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net