

ರಾಜಾಜಿನಗರ: ರೋಗಿಗಳಿಗೆ ಚಿಕಿತ್ಸೆ ನೀಡಲು ಹಗಲಿರಳು ಶ್ರಮಿಸುತ್ತಿರುವ ವೈದ್ಯರ ಮೇಲೆ ಹಲ್ಲೆ ನಡೆಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿ ಮಾಡುವ ಘಟನೆಗಳು ನಡೆದರೆ ಉಗ್ರ ಕ್ರಮ ಕೈಗೊಳ್ಳಲು ಕಾನೂನು ರೂಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜಾಜಿನಗರದ ಖಾಸಗಿ ಹೋಟೆಲ್ನಲ್ಲಿ ವಿಸಿಎನ್ ಡಾಕ್ಟರ್ಸ್ ವೆಲ್ೇರ್ ಅಸೋಸಿಯೇಷನ್ ಆಯೋಜಿಸಿದ್ದ ವೈದ್ಯರ ದಿನಾಚರಣೆ, ಸಾಧಕ ವೈದ್ಯರಿಗೆ ಸನ್ಮಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ವೈದ್ಯರಿಗೆ ಗೌರವ ದೊರೆಯಬೇಕು. ವೈದ್ಯಕೀಯ ಕ್ಷೇತ್ರದ ಜನರಿಗೆ ಅವಶ್ಯಕತೆ ಹೆಚ್ಚಾಗುತ್ತಿದೆ. ಹೊಸ ತಂತ್ರಜ್ಞಾನ ಅವಿಷ್ಕಾರಗೊಂಡಿದ್ದು, ಬಹುತೇ ಖಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ. ಮಾನವ ಅಂಗಾಂಗ ಹಾಳಾದರೆ ಬದಲಾಯಿಸುವ ಮಟ್ಟಕ್ಕೆ ಅಭಿವ್ಧೃಯಾಗಿದೆ. ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ 90 ವರ್ಷ ಬದುಕು ಸಾಗಿಸಬಹುದು.ವೈದ್ಯಕೀಯ ಸೇವೆಯಲ್ಲಿ ನಮ್ಮ ರಾಜ್ಯವು ದೇಶದಲ್ಲಿಯೇ ಮೊದಲನೇಯ ಸ್ಥಾನದಲ್ಲಿದೆ. ನೂತನ ಆಸ್ಪತ್ರೆಗಳು 6 ತಿಂಗಳ ಒಳಗೆ ಸಂಪೂರ್ಣ ಪರವಾನಗಿ ಪಡೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ, ವಿಸಿಎನ್ ಡಾಕ್ಟರ್ಸ್ ವೇಲ್ಫೇರ್ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ ಡಾ. ಎಸ್.ರಾಜು, ಚಿತ್ರನಟ ಶ್ರೀನಿವಾಸಮೂರ್ತಿ, ಕೆ.ಸಿ ಜನರಲ್ ನಿವೃತ್ತ ಅಧೀಕ್ಷಕ ಡಾ.ಶಂಕರಲಿಂಗಯ್ಯ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್,ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ್ ಶೆಟ್ಟಿ ಮತ್ತು ವೈದ್ಯರುಗಳಾದ ಬಿ.ಟಿ.ರಮೇಶ್, ಆಶಾ, ಜಯಶ್ರೀ ಮತ್ತಿತರರು ಪಾಲ್ಗೊಂಡಿದ್ದರು.
ವೈದ್ಯ ಸಾಹಿತಿ ಎಂ.ಆರ್. ದಿವ್ಯಶ್ರೀ ಯವರ ‘ಅನಾಮಿಕ’ ಪುಸ್ತಕ ಬಿಡುಗಡೆ ಮಾಡಲಾಯಿತು. ಇದೇ ವೇಳೆ ವಿವಿಧ ಕ್ರೀಡೆಯಲ್ಲಿ ಗೆದ್ದ ವೈದ್ಯರು, ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಾಗೂ ವೈದ್ಯ ವೃತ್ತಿಯಲ್ಲಿ ಸಾಧನೆ ಮಾಡಿದ ಡಾ.ಶಂಕರಲಿಂಗಯ್ಯ, ಡಾ.ಎಮ್.ಸುನೀಲ್ ಬಾಬು, ಡಾ.ಶ್ರೀನಿವಾಸ್, ಡಾ.ಗಾಯಿತ್ರಿ ಥಾಗಶ್ರೀ, ಡಾ.ಮಂಜುಳದೇವಿ, ಡಾ.ಮಂಜುನಾಥ್, ಡಾ.ಪದ್ಮಾವತಿ, ಡಾ.ರಮೇಶ್ ಎ.ಸಿ, ಡಾ.ರಾಮು ಮತ್ತಿತರರನ್ನು ಸನ್ಮಾನಿಸಲಾಯಿತು.