

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರಾಜ್ಯದ ನಂ.1 ಪತ್ರಿಕೆ ವಿಜಯವಾಣಿ ನವರಾತ್ರಿ ಮತ್ತು ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಅದೃಷ್ಟದ ಬಹುಮಾನ ಪಡೆಯಲು ಅನುಕೂಲವಾಗಲು ಆಯೋಜಿಸಿರುವ ವಿಜಯವಾಣಿ ವಿಜಯೋತ್ಸವ 2024 ಇದರ ಕೂಪನ್ ಬಿಡುಗಡೆ ಪವರ್ ಆನ್ ಸಂಸ್ಥೆಯಲ್ಲಿ ಶನಿವಾರ ನಡೆಯಿತು. ಹಿರಿಯರಾದ ಪಾರ್ಶ್ವನಾಥ ಜೈನ್ ಕೂಪನ್ ಬಿಡುಗಡೆಗೊಳಿಸಿ ಶುಭಹಾರೈಸಿದರು.
ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿ, ಕಳೆದ 15 ವರ್ಷಗಳಿಂದ ವಿಜಯವಾಣಿ ಪತ್ರಿಕೆ ಓದುಗರ, ಜಾಹೀರಾತುದಾರ ಪ್ರೋತ್ಸಾಹದಿಂದ ರಾಜ್ಯದ ನಂ.1 ಪತ್ರಿಕೆಯಾಗಿದೆ. ವಿಆರ್ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ.ವಿಜಯ ಸಂಕೇಶ್ವರ್ ಮತ್ತು ಡಾ.ಆನಂದ್ ಸಂಕೇಶ್ವರ್ವೃತ್ತಿ ವ್ಯವಹಾರದಲ್ಲಿ ಕಠಿನ ಶ್ರಮ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬಂದವರು. ಪವರ್ ಆನ್ನಲ್ಲಿ ಎರಡು ಸಾವಿರ ರೂ. ಮೇಲ್ಪಟ್ಟ ವಸ್ತುಗಳನ್ನು ಖರೀದಿಸಿದರೆ ಕಾರು, ಬೈಕ್, ಸಹಿತ 2500ಕ್ಕೂ ಅಧಿಕ ಬಹುಮಾನ ಗೆಲ್ಲಬಹುದು ಎಂದರು.
ಕೆಡಿಪಿ ಸದಸ್ಯ ಸುನೀಲ್ ಕುಮಾರ್ ಜೈನ್, ಪತ್ರಕರ್ತ ಸಂತೋಷ್ ಕೋಟ್ಯಾನ್, ಶಿಕ್ಷಕ ನಾರಾಯಣ, ಪವರ್ ಆನ್ ಸಂಸ್ಥೆಯ ಮಾಲೀಕ ಶೀತಲ್ ಜೈನ್, ನ್ಯೂ ಪವರ್ ಅಯನ್ಸ್ನ ಮಾಲೀಕ ಅರಿಹಂತ್, ಸುಧೀರ್ ಕುಮಾರ್ ಜೈನ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ನಮ್ಮಲ್ಲಿ ದ್ವಿಚಕ್ರ ವಾಹನ ಮತ್ತು ಎಲ್ಲ ವಾಹನಗಳ ಬ್ಯಾಟರಿಗಳು ಹಾಗೂ ಎಲ್ಲ ಕಂಪನಿಯ ಇನ್ವರ್ಟರ್ ಬ್ಯಾಟರಿಗಳು ದೊರೆಯುತ್ತವೆ. ಹಳೆಯ ಬ್ಯಾಟರಿಗಳನ್ನು ಬದಲಾಯಿಸಿ ಹೊಸ ಬ್ಯಾಟರಿ ಇನ್ವರ್ಟರ್ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಸೋಲಾರ್, ಫ್ರಿಜ್, ವಾಷಿಂಗ್ ಮಷಿನ್, ಟಿವಿ ಮತ್ತು ಎಲ್ಲ ತರದ ಫರ್ನಿಚರ್ ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಹೋಂ ಅಪ್ಲಾಯನ್ಸ್ಗಳು ಲಭ್ಯವಿದೆ. ಫೈನಾನ್ಸ್ ಸೌಲಭ್ಯ ಇದೆ. ಬಜಾಜ್, ಎಚ್ಡಿಎಫ್ಸಿ, ಐಡಿಎಫ್ಸಿ ಸೌಲಭ್ಯ ಸಿಗಲಿದೆ ಎಂದು ಮಾಲೀಕರಾದ ಶೀತಲ್ ಜೈನ್, ಅರಿಹಂತ್ ಜೈನ್ ತಿಳಿಸಿದ್ದಾರೆ.