ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಆಚಾರ್ಯರಿಗೆ ಸನ್ಮಾನ

ptr_22 aug GL
ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಆಚಾರ್ಯ ಅವರನ್ನು ಬಾಂಧವ್ಯ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.
Published on

ಪುತ್ತೂರು: ಉದ್ಯಮ ಕ್ಷೇತ್ರದ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾಧನೆಗೈದಿರುವುದಕ್ಕೆ ಸಂಬಂಧಿಸಿ ವಿಆರ್‌ಎಲ್ ಸಮೂಹ ಸಂಸ್ಥೆಯ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ವತಿಯಿಂದ ವಿಜಯರತ್ನ-2022 ಪ್ರಶಸ್ತಿ ಪುರಸ್ಕೃತಗೊಂಡಿರುವ ಪುತ್ತೂರಿನ ಖ್ಯಾತ ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಆಚಾರ್ಯ ಅವರನ್ನು ಬಾಂಧವ್ಯ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.

ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಆಚಾರ್ಯ ಅವರನ್ನು ಬಾಂಧವ್ಯ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.


ಜಿ.ಎಲ್.ಕಾಂಪ್ಲೆಕ್ಸ್‌ನಲ್ಲಿರುವ ಜಿ.ಎಲ್.ಬಲರಾಮ ಆಚಾರ್ಯರವರ ಕಚೇರಿಯಲ್ಲಿ ಬಲರಾಮ ಆಚಾರ್ಯ ಅವರನ್ನು ಅಭಿನಂದಿಸಲಾಯಿತು. ಬಾಂಧವ್ಯ ಫ್ರೆಂಡ್ಸ್ ವತಿಯಿಂದ ಪುತ್ತೂರಿನಲ್ಲಿ ಪ್ರತೀ ವರ್ಷ ನಡೆಯುತ್ತಿರುವ ಬಾಂಧವ್ಯ ಕ್ರಿಕೆಟ್ ಪಂದ್ಯಾಟಕ್ಕೆ ಪ್ರಾಯೋಜಕತ್ವ ವಹಿಸಿ ಬೆಂಬಲ ನೀಡುತ್ತಿರುವುದಕ್ಕಾಗಿ ಈ ಸಂದರ್ಭದಲ್ಲಿ ಬಲರಾಮ ಆಚಾರ್ಯರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಬಾಂಧವ್ಯ ಫ್ರೆಂಡ್ಸ್ ಸಂಘಟಕ ಸ್ಕರಿಯ ಯಂ.ಎ, ಫಾರೂಕ್ ಶೇಕ್ ಮತ್ತು ಪ್ರಶಾಂತ ರೈ, ಉದಯಕುಮಾರ್ ಅಭಿನಂದಿಸಿದರಲ್ಲದೆ ಜಿ.ಎಲ್.ಬಲರಾಮ ಅಚಾರ್ಯರವರಿಂದ ಇನ್ನಷ್ಟು ಸಮಾಜ ಸೇವೆ ಸಿಗುವ ಮೂಲಕ ಉದ್ಯಮ ಕ್ಷೇತ್ರದಲ್ಲೂ ಪುತ್ತೂರಿಗೆ ಇನ್ನಷ್ಟು ಕೀರ್ತಿ ಬರುವಂತಾಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net