ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ ವಿ.ಪಿ. ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿAಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಇಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿAಗ್ ವಿಭಾಗವು, ರಲೋಗಿಕ್ ಆರ್‌ಲಾಜಿಕ್ ಟೆಕ್ನಾಲಜೀಸ್ ಸಹಯೋಗದೊಂದಿಗೆ ಇತ್ತೀಚೆಗೆ ಡ್ರೋನ್ ತಂತ್ರಜ್ಞಾನ ಕಾರ್ಯಾಗಾರ ನಡೆಯಿತು.
ಸೆ. 26 ಮತ್ತು 27ರಂದು ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಡ್ರೋನ್ ತಂತ್ರಜ್ಞಾನದ ಕುರಿತು ಪ್ರಾಯೋಗಿಕ ಹಾಗೂ ನೈಜ ಅನುಭವ ಒದಗಿಸುವ ಉದ್ದೇಶ ಹೊಂದಲಾಗಿತ್ತು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಡ್ರೋನ್‌ಗಳ ವಿವಿಧ ಘಟಕಗಳು, ಅವುಗಳ ಜೋಡಣೆ, ಕಾರ್ಯನಿರ್ವಹಣೆ ಹಾಗೂ ಹಾರಾಟದ ಕುರಿತು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡರು. ಆ ಮೂಲಕ ತರಗತಿಯ ಕಲಿಕೆಯೊಂದಿಗೆ ಮಾನವರಹಿತ ವೈಮಾನಿಕ ವಾಹನಗಳು (ಯುಎವಿಎಸ್) ಕುರಿತ ಮೂಲ ಹಾಗೂ ಪ್ರಾಯೋಗಿಕ ತಿಳಿವಳಿಕೆ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಿತು.
ಕಾರ್ಯಾಗಾರದಲ್ಲಿ 50 ವಿದ್ಯಾರ್ಥಿಗಳು ಭಾಗವಹಿಸಿದ್ದು, ಡ್ರೋನ್‌ಗಳು ಮತ್ತು ಯುಎವಿಗಳ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಹಾಗೂ ಈ ಕ್ಷೇತ್ರದಲ್ಲಿ ಉದ್ಯೋಗ ಮತ್ತು ವೃತ್ತಿ ಅವಕಾಶಗಳನ್ನು ಅನ್ವೇಷಿಸಲು ಪ್ರೇರೇಪಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಾಗಾರದ ಸಂಯೋಜಕರಾದ ಉಮೇಶ ದೀಕ್ಷಿತ್, ಸತ್ಯನಾರಾಯಣ ಪಡಗಾನೂರ ಮತ್ತು ಪರಮಾನಂದ ಪಾಟೀಲ ಅವರು, ವಿದ್ಯಾರ್ಥಿಗಳಿಗೆ ಇತ್ತೀಚಿನ ಡ್ರೋನ್ ತಂತ್ರಜ್ಞಾನಗಳೊAದಿಗೆ ಅಮೂಲ್ಯವಾದ ಪ್ರಾಯೋಗಿಕ ಅನುಭವವನ್ನು ಒದಗಿಸುತ್ತಿರುವ ಆರ್‌ಲಾಜಿಕ್ ಟೆಕ್ನಾಲಜೀಸ್ ಸಂಸ್ಥೆ ನಿರ್ದೇಶಕ ರಾಕೇಶ ಅವರಿಗೆ ಕೃತಜ್ಞತೆ ತಿಳಿಸಿದರು.
ಇಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥೆ ಜಯಲಕ್ಷಿ÷್ಮ ಗೋನಾಳ, ಪ್ರಾಚಾರ್ಯ ಮಂಜುನಾಥ ಪಿ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಕಾರ್ಯಾಗಾರವು ಅವರಿಗೆ ಉತ್ತಮ ಹಾಗೂ ಜ್ಞಾನವರ್ಧಕ ಅನುಭವ ನೀಡಲಿ ಎಂದು ಹಾರೈಸಿದರು.