ಹಣ ಲೂಟಿಗೆ ಬಂದ ದುಷ್ಕರ್ಮಿಗಳಿಂದ ಎಟಿಎಂ ಸೆಕ್ಯುರಿಟಿ ಗಾರ್ಡ್​ ಬರ್ಬರ ಹತ್ಯೆ

Security
Published on

ವಿಜಯಪುರ: ಎಟಿಎಂ ಸೆಕ್ಯುರಿಟಿ ಗಾರ್ಡ್​ ಅನ್ನು ಬರ್ಬರವಾಗಿ ಹತ್ಯೆಗೈದು ಹಣ ಲೂಟಿಗೆ ಯತ್ನಿಸಿರುವ ಘಟನೆ ಸೋಮವಾರ ತಡರಾತ್ರಿ ಸಿಂದಗಿ ಪಟ್ಟಣದಲ್ಲಿರುವ ಐಸಿಐಸಿಐ ಬ್ಯಾಂಕ್​ನ ಎಟಿಎಂನಲ್ಲಿ ನಡೆದಿದೆ.

ಮದಬಾವಿ ತಾಂಡಾದ ನಿವಾಸಿ ರಾಹುಲ್ ರಾಠೋಡ(25) ಹತ್ಯೆಯಾಗಿರುವ ಸೆಕ್ಯೂರಿಟಿ ಗಾರ್ಡ್. ಖದೀಮರು ಕೊಲೆ ಮಾಡಿ ಹಣದೋಚಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಹೊರಬಿದ್ದ ಎಟಿಎಂ ಸೈರನ್ ಶಬ್ದಕ್ಕೆ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net