ಕರೊನಾ ಭಯದಲ್ಲಿದ್ದ ಗರ್ಭಿಣಿಗೆ ಸರಳ ಹೆರಿಗೆ ಮಾಡಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ

Ambulence Staff
Published on

ವಿಜಯನಗರ: ಕರೊನಾ ವೈರಸ್​ ಭಯದಲ್ಲಿದ್ದ ಗರ್ಭಿಣಿಗೆ ಸರಳ ಹೆರಿಗೆ ಮಾಡಿಸುವ ಮೂಲಕ 108 ಆಂಬ್ಯುಲೆನ್ಸ್ ಸಿಬ್ಬಂದಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಆಸ್ಪತ್ರೆಗೆ ಹೋಗದೆ ಆಂಬ್ಯುಲೆನ್ಸ್​ನಲ್ಲೇ ಸರಳ ಹೆರಿಗೆ ಮಾಡಲಾಗಿದ್ದು, ತಾಯಿ ಮತ್ತು ಗಂಡು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.

ಆಸ್ಪತ್ರೆಗೆ ಹೋದರೆ ಕರೊನಾ ಆವರಿಸಿಬಿಡುತ್ತದೆ ಎಂಬ ಭಯದಲ್ಲಿದ್ದ ಗರ್ಭಿಣಿ ಮಹಿಳೆ ಚೈತ್ರ ಬಸವರಾಜ ಇದ್ದರು. ಆದರೆ, ಹೊಸಪೇಟೆ ತಾಲೂಕಿನ ವೆಂಕಟಾಪುರದಿಂದ ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಹೆರಿಗೆ ಆಂಬ್ಯುಲೆನ್ಸ್​ ಸಿಬ್ಬಂದಿ ಹೆರಿಗೆ ಮಾಡಿಸಿದ್ದಾರೆ.

ಆಸ್ಪತ್ರೆಗೆ ಹೋಗುವುದೇ ಕರೊನಾ ಮಹಾಮಾರಿಯನ್ನು ಅಂಟಿಸಿಕೊಂಡು ಮರಳುವುದಕ್ಕೆ ಎನ್ನುವ ಭಯದ ವಾತಾವರಣದಲ್ಲಿ ಹೊಸಪೇಟೆ ಜನರಿದ್ದು, ಇದೀಗ ಗರ್ಭಿಣಿಗೆ ಮಾರ್ಗಮಧ್ಯೆಯೇ ಹೆರಿಗೆ ಆಗಿರುವುದು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net