More

    ಏರ್​ ಇಂಡಿಯಾ ಸರ್ವರ್​ ಮೇಲೆ ಸೈಬರ್​ ದಾಳಿ: 4.5 ಮಿಲಿಯನ್​ ಗ್ರಾಹಕರ ದತ್ತಾಂಶ ಸೋರಿಕೆ

    ನವದೆಹಲಿ: ರಾಷ್ಟ್ರೀಯ ವಿಮಾನ ಸಂಸ್ಥೆ ಏರ್​ ಇಂಡಿಯಾದ ಸರ್ವರ್​ ಮೇಲೆ ನಡೆದ ಸೈಬರ್​ ದಾಳಿಯಿಂದಾಗಿ ಭಾರೀ ಪ್ರಮಾಣದಲ್ಲಿ ದತ್ತಾಂಶ ಸೋರಿಕೆಯಾಗಿದ್ದು, ಏರ್​ ಇಂಡಿಯಾದ ಸುಮಾರು 4.5 ಮಿಲಿಯನ್​ ಗ್ರಾಹಕರ ಮೇಲೆ ಪರಿಣಾಮ ಬೀರಿದೆ.

    ಸೈಬರ್​ ದಾಳಿಯಲ್ಲಿ ಪ್ರಯಾಣಿಕರ ಪಾಸ್​ಪೋರ್ಟ್​ ಹಾಗೂ ಕ್ರೆಡಿಟ್​ ಕಾರ್ಡ್​ ಸೇರಿದಂತೆ ಕೆಲವೊಂದು ಮಾಹಿತಿಗಳು ಲೀಕ್​ ಆಗಿವೆ ಎಂದು ಶುಕ್ರವಾರ ಏರ್​ ಇಂಡಿಯಾ ವಿಮಾನ ಸಂಸ್ಥೆ ತಿಳಿಸಿದೆ.

    ಪ್ರಯಾಣಿಕರ ಸೇವಾ ವ್ಯವಸ್ಥೆಯ ಡೇಟಾ ಪ್ರೊಸೆಸರ್ ಇತ್ತೀಚೆಗಷ್ಟೇ ಏರ್​ ಇಂಡಿಯಾದ ಸೆಕ್ಯುರಿಟಿ ಉಲ್ಲಂಘನೆಯ ಸೂಚನೆ ನೀಡಿತು. ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಸಹ ಸೋರಿಕೆ ಆಗಿದೆ ಎಂದು​​ ನಮ್ಮ ಬದ್ಧತೆಯ ಭಾಗವಾಗಿ, ನಾವು ನಿಮಗೆ ತಿಳಿಯಲು ಬಯಸುತ್ತೇವೆಂದು ಏರ್​ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    2011ರ ಆಗಸ್ಟ್​ 26 ಮತ್ತು 2021 ಫೆಬ್ರವರಿ 20ರ ನಡುವಿನ ಅವಧಿಯಲ್ಲಿ ನೋಂದಣಿ ಆಗಿರುವ ವೈಯಕ್ತಿಕ ಮಾಹಿತಿ ಸೇರಿದಂತೆ ಅನೇಕ ದತ್ತಾಂಶಗಳು ಸೋರಿಕೆ ಆಗಿದ್ದು, ದೇಶಾದ್ಯಂತ ಲಕ್ಷಾಂತರ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಹೆಸರು, ಜನ್ಮ ದಿನಾಂಕ, ಸಂಪರ್ಕ ಮಾಹಿತಿ, ಪಾಸ್​ಪೋರ್ಟ್​ ಮಾಹಿತಿ, ಟಿಕೆಟ್​ ಮಾಹಿತಿ ಆಗಾಗ ಪ್ರಯಾಣ ಬೆಳೆಸಿದವರ ದತ್ತಾಂಶ ಮತ್ತು ಕ್ರೆಡಿಟ್​ ಕಾರ್ಡ್​ ಮಾಹಿತಿ ಸಹ ಸೈಬರ್​ ಖದೀಮರ ಕೈಸೇರಿರುವುದಾಗಿ ಏರ್​ ಇಂಡಿಯಾ ಹೇಳಿದೆ.

    ಫೆಬ್ರವರಿ ಕೊನೆಯ ವಾರದಲ್ಲಿ ತನ್ನ ಡೇಟಾ ಪ್ರೊಸೆಸರ್​ ಎಸ್​ಐಟಿಎ ಪಿಎಸ್​ಎಸ್​ ಮೇಲೆ ಸೈಬರ್​ ದಾಳಿ ನಡೆದಿದೆ ಎಂದು ಮಾರ್ಚ್​ನಲ್ಲಿ ಏರ್​ ಇಂಡಿಯಾ ಹೇಳಿಕೊಂಡಿತ್ತು. ಇದೀಗ ದತ್ತಾಂಶವೂ ಸೋರಿಕೆಯಾಗಿರುವುದಾಗಿ ಬಾಯ್ಬಿಟ್ಟಿದೆ. ದತ್ತಾಂಶ ದುರ್ಬಳಕೆ ಆಗಿರುವ ಬಗ್ಗೆ ಇದುವರೆಗೂ ಯಾವುದೇ ಸಾಕ್ಷಿ ಇಲ್ಲ ಎಂದು ಸಂಸ್ಥೆ ಭರವಸೆ ನೀಡಿದ್ದು, ದಾಳಿ ಸಂಬಂಧ ದೇಶ-ವಿದೇಶದಲ್ಲಿರುವ ರೆಗ್ಯುಲೇಟರಿ ಏಜೆನ್ಸಿ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.

    ತಮ್ಮ ವೈಯಕ್ತಿಕ ಡೇಟಾಗಳ ಸುರಕ್ಷತೆಗಾಗಿ ಪಾಸ್​ವರ್ಡ್​ಗಳನ್ನು ಬದಲಾಯಿಸಿಕೊಳ್ಳುವಂತೆ ಏರ್​ ಇಂಡಿಯಾ ಗ್ರಾಹಕರ ಬಳಿ ಕೋರಿದೆ. ಅಲ್ಲದೆ, ಹೆಚ್ಚಿನ ಮಾಹಿತಿಗೆ [email protected] ಈಮೇಲ್​ ಅಥವಾ 01242641415 ಕರೆ ಮಾಡಿ ಎಂದು ಹೇಳಿದೆ ಮತ್ತು www.airindia.in ವೆಬ್​ಸೈಟ್​ ಭೇಟಿ ನೀಡಲು ತಿಳಿಸಿದೆ.

    ಪ್ರಸ್ತುತ, “ವಂದೇ ಭಾರತ್” ಮಿಷನ್ ಅಡಿಯಲ್ಲಿ ವಿಶೇಷ ವಿಮಾನಗಳನ್ನು ಹೊರತುಪಡಿಸಿ, ಏರ್​ ಇಂಡಿಯಾ ದೇಶೀಯ ವಿಮಾನಯಾನಗಳನ್ನು ಮಾತ್ರ ನಿರ್ವಹಿಸುತ್ತಿದೆ. ಏಕೆಂದರೆ ಕೊರೊನಾವೈರಸ್ ಕಾಯಿಲೆ (ಕೋವಿಡ್ -19) ಸಾಂಕ್ರಾಮಿಕ ರೋಗದಿಂದಾಗಿ ಅಂತಾರಾಷ್ಟ್ರೀಯ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. (ಏಜೆನ್ಸೀಸ್​)

    ನೈರುತ್ಯ ಚೀನಾದಲ್ಲಿ ಪ್ರಬಲ ಭೂಕಂಪ: 3 ಸಾವು, 27 ಮಂದಿಗೆ ಗಾಯ,7.3 ತೀವ್ರತೆ ದಾಖಲು

    ತಮ್ಮನೋ ತಂಗಿಯೋ ಇದ್ದಿದ್ರೆ ಚೆನ್ನಾಗಿರ್ತಿತ್ತು!; ಒಂದೇ ಮಗುವಿರುವ ಮನೆಗಳಲ್ಲಿ ಒಂಟಿತನ..

    ಬರೇ ಗೋತ್ರ ಬಿಟ್ಟರ ನಡಿಯಂಗಿಲ್ಲಾ.. ಕೋವಿಶೀಲ್ಡ್ ತೊಗೊಂಡವಂಗ ಕೋವ್ಯಾಕ್ಸಿನ್ ತೊಗೊಂಡೊಕಿನ್ ಕೊಡಬಹುದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts