More

    ನೈರುತ್ಯ ಚೀನಾದಲ್ಲಿ ಪ್ರಬಲ ಭೂಕಂಪ: 3 ಸಾವು, 27 ಮಂದಿಗೆ ಗಾಯ,7.3 ತೀವ್ರತೆ ದಾಖಲು

    ಬೀಜಿಂಗ್​: ಮ್ಯಾನ್ಮಾರ್​ ಗಡಿ ಸಮೀಪದ ನೈರುತ್ಯ ಚೀನಾದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಮೂವರು ಪ್ರಾಣ ಕಳೆದುಕೊಂಡಿದ್ದು, ಎರಡು ಡಜನ್​ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

    ರಿಕ್ಟರ್​ ಮಾಪಕದಲ್ಲಿ 7.3 ಭೂಕಂಪನದ ತೀವ್ರತೆ ದಾಖಲಾಗಿದ್ದು, ಸ್ಥಳದಲ್ಲಿ ಬೀಡುಬಿಟ್ಟಿರುವ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

    ಮೊದಲ ಭೂಕಂಪನ ಸಂಭವಿಸಿದ ಉತ್ತರಕ್ಕೆ ಸುಮಾರು 1,000 ಕಿಲೋಮೀಟರ್ (621 ಮೈಲಿ) ದೂರವಿರುವ ಉತ್ತರ ಚೀನಾದ ಕಿಂಗ್‌ಹೈ ಪ್ರಾಂತ್ಯದ ದಕ್ಷಿಣ ಭಾಗದಲ್ಲಿ ಶನಿವಾರ ಮುಂಜಾನೆ ಎರಡನೇ ಭೂಕಂಪನ ಸಂಭವಿಸಿದೆ. ಆದರೆ ವಿರಳ ಜನಸಂಖ್ಯೆ ಇರುವ ಪ್ರದೇಶದಲ್ಲಿ ಯಾವುದೇ ಸಾವು-ನೋವು ಅಥವಾ ಹಾನಿ ಸಂಭವಿಸಿಲ್ಲ.

    ಎರಡು ಭೂಕಂಪನಗಳಿಗೂ ಸಂಬಂಧವಿಲ್ಲ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಭೂ ಭೌತಶಾಸ್ತ್ರಜ್ಞ ಜೋನಾಥನ್​ ಟೈಟೆಲ್​ ಹೇಳಿದ್ದಾರೆ. ಶುಕ್ರವಾರ ರಾತ್ರಿಯು ಭೂಕಂಪನ ಸಂಭವಿಸಿದೆ. ಯುನ್ನಾನ್ ಪ್ರಾಂತ್ಯದ ಭೂಕಂಪನ ಬ್ಯೂರೋ ಶುಕ್ರವಾರ ರಾತ್ರಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು 6.4 ಎಂದು ನೀಡಿದೆ. ಡಾಲಿ ನಗರದ ವಾಯುವ್ಯ ದಿಕ್ಕಿನಿಂದ 8 ಕಿಲೋಮೀಟರ್ (5 ಮೈಲಿ) ಮೇಲ್ಮೈನಲ್ಲಿ ಇದು ಸಂಭವಿಸಿದೆ ಎಂದು ಹೇಳಲಾಗಿದೆ.

    ಜನಸಂಖ್ಯೆ ವಿರಳವಾಗಿರುವುದರಿಂದ ಭೂಕಂಪ ಹೆಚ್ಚು ಪ್ರಭಾವ ಬೀರಿಲ್ಲ. ಒಂದು ವೇಳೆ ಜನನಿಬಿಡ ಪ್ರದೇಶವಾಗಿದ್ದರೆ ಅಲ್ಲಿನ ಚಿತ್ರಣವೇ ಬೇರೆಯಾಗಿರುತ್ತಿತ್ತು. ಸಾಕಷ್ಟು ಸಾವು-ನೋವುಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿತ್ತು ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ತಮ್ಮನೋ ತಂಗಿಯೋ ಇದ್ದಿದ್ರೆ ಚೆನ್ನಾಗಿರ್ತಿತ್ತು!; ಒಂದೇ ಮಗುವಿರುವ ಮನೆಗಳಲ್ಲಿ ಒಂಟಿತನ..

    ಬರೇ ಗೋತ್ರ ಬಿಟ್ಟರ ನಡಿಯಂಗಿಲ್ಲಾ.. ಕೋವಿಶೀಲ್ಡ್ ತೊಗೊಂಡವಂಗ ಕೋವ್ಯಾಕ್ಸಿನ್ ತೊಗೊಂಡೊಕಿನ್ ಕೊಡಬಹುದಾ?

    ಉಸಿರು ತಂಡಕ್ಕೆ ದರ್ಶನ್ ಸಾಥ್; ಅವಶ್ಯಕತೆ ಇದ್ದವರಿಗೆ ಆಕ್ಸಿಜನ್ ಪೂರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts