More

  ಏರ್ ಇಂಡಿಯಾ ವಿಮಾನದಲ್ಲಿ ಸೀಲಿಂಗ್​​ನಿಂದ ನೀರು ಸೋರಿಕೆ; ಆತಂಕದಲ್ಲಿ ಪ್ರಯಾಣಿಕರು

  ನವದೆಹಲಿ: ದೆಹಲಿಯಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಓವರ್‌ಹೆಡ್ ಬಿನ್‌ಗಳಿಂದ ನೀರು ಸೋರಿಕೆಯಾಗುತ್ತಿರುವುದು ಪ್ರಯಾಣಿಕರನ್ನು ಆತಂಕಕ್ಕೆ ದೂಡಿದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

  ಟ್ವಿಟರ್ ಬಳಕೆದಾರೊಬ್ಬರು ವಿಮಾನದಲ್ಲಿ ಓವರ್‌ಹೆಡ್ ಬಿನ್‌ಗಳಿಂದ ನೀರು ಸೋರಿಕೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಪ್ರಯಾಣಿಕರ ಆಸನಗಳು ಒದ್ದೆಯಾಗಿರುವುದು ಕಂಡುಬಂದಿದೆ.

  ‘ಏರ್ ಇಂಡಿಯಾ.. ನಮ್ಮೊಂದಿಗೆ ವಿಮಾನಯಾನ.. ಇದು ಪ್ರಯಾಣವಲ್ಲ.. ಮುಳುಗುವ ಭಾವನೆ’ ಎಂಬ ವ್ಯಂಗ್ಯ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋ ವೈರಲ್ ಆಗಿದೆ.ಆದರೆ ನೀರು ಸೋರಿಕೆಗೆ ಕಾರಣ ಪತ್ತೆಯಾಗಿಲ್ಲ.

  ದೆಹಲಿಯಿಂದ ಲಂಡನ್‌ನ ಗ್ವಾಟಿಕ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಬೋಯಿಂಗ್ ಬಿ787 ಡ್ರೀಮ್‌ಲೈನರ್‌ನಲ್ಲಿ ಈ ಘಟನೆ ನಡೆದಿದೆ. ವಿಮಾನದ ವಿವರಗಳು ಖಚಿತವಾಗದಿದ್ದರೂ, ‘ಯಾವುದೇ ಏರ್‌ಲೈನ್‌ನಲ್ಲಿ ಇದುವರೆಗೆ ಸಂಭವಿಸಿದೆಯೇ’ ಎಂದು ಹಲವರು ಪ್ರಶ್ನೆಗಳನ್ನು ಎತ್ತಿದರು. ‘ಇದು ತಾಂತ್ರಿಕ ದೋಷವಿರಬಹುದು… ವಿಮಾನಯಾನ ಸಂಸ್ಥೆಗೆ ಮಾನಹಾನಿ ಮಾಡಲು ವೀಡಿಯೊ ಪ್ರಚಾರ ಮಾಡುವ ಹುಡುಗರಿಗಿಂತಲೂ ಪ್ರಯಾಣಿಕರು ಹೆಚ್ಚು ಆರಾಮದಾಯಕವಾಗಿದ್ದಾರೆಂದು ತೋರುತ್ತದೆ’. ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಏರ್ ಇಂಡಿಯಾ ಇನ್ನೂ ಪ್ರತಿಕ್ರಿಯಿಸಿಲ್ಲ.

  ಇದು ಕೆಎಫ್‌ಸಿ ಥೀಮ್ ವೆಡ್ಡಿಂಗ್; ಎಲ್ಲಿ ನೋಡಿದ್ರು ಬಕೆಟ್ ಚಿಕನ್ ವಿಂಗ್ಸ್, ಕ್ರಿಸ್ಪಿ ಚಿಕನ್ ಪಾಪ್​ಕಾರ್ನ್​​

  See also  ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು- 06/03/2024

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts