ಕೂಡ್ಲಿಗಿ ಪೊಲೀಸ್ ಠಾಣೆಯ ಎಎಸ್​ಐರನ್ನು ಬಲಿ ಪಡೆದ ಕರೊನಾ

ASI
Published on

ವಿಜಯನಗರ: ಪೊಲೀಸ್​ ಇಲಾಖೆಯ ಮೇಲೂ ಕರೊನಾ ಮೃತ್ಯು ಛಾಯೆ ಆವರಿಸಿದೆ. ಈಗಾಗಲೇ ಸಾಕಷ್ಟು ಪೊಲೀಸ್​ ಸಿಬ್ಬಂದಿತನ್ನು ತನ್ನ ಮೃತ್ಯುಕೂಪಕ್ಕೆ ಸೆಳೆದಿರುವ ಕರೊನಾ ಇದೀಗ ಕೂಡ್ಲಿಗಿ ಪೊಲೀಸ್​ ಠಾಣೆಯ ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​ರನ್ನು ಬಲಿಪಡೆದುಕೊಂಡಿದೆ.

ವಿರೂಪಾಕ್ಷಪ್ಪ (58) ಕರೊನಾಗೆ ಬಲಿಯಾದ ಎಎಸ್​ಐ. ಇವರು ಮೂಲತಃ ಸಂಡೂರು ತಾಲೂಕಿನ ಚೋರನೂರು ಗ್ರಾಮದವರು. ಕಳೆದ ಕೆಲ ದಿನಗಳ ಹಿಂದೆ ಕರೊನಾ ಧೃಡಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು.

ಜಿಂದಾಲ್​ನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿರೂಪಾಕ್ಷಪ್ಪ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net