ವಿದ್ಯಾವಾಹಿನಿ ಕಾಲೇಜಿನ ಉತ್ತಮ ಸಾಧನೆ

Vidyavahini_Pu_Result
Published on

ತುಮಕೂರು: ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜು ಈ ಬಾರಿ ದ್ವೀತಿಯ ಪಿಯುಸಿ ಪರೀಕ್ಷೆ ಯಲ್ಲಿ ಉತ್ತಮ ಸಾಧನೆಗೈದಿದ್ದು ಶೇ.88ರಷ್ಟು ಫಲಿತಾಂಶ ಗಳಿಸಿದೆ. ಕಾಲೇಜಿನ 200ಕ್ಕು ಹೆಚ್ಚು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ 363 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಎಚ್​.ಎನ್​.ಭುವನ್​ (592), ಎಸ್​.ಜೆ.ಜಮುನ (592) ಜಿಲ್ಲೆಯ ತೃತೀಯ ಟಾಪರ್​ಗಳಾಗಿ ಹೊರಹೊಮ್ಮಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಕೆ.ವಿ.ಲೀನಾ (587) ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

400ಕ್ಕೆ 400: ಭುವನ್​ ವಾಣಿಜ್ಯ ವಿಭಾಗದ ಎಸ್​ಎಂಬಿಎ ವಿಷಯಗಳಲ್ಲಿ 400 ಕ್ಕೆ 400 ಅಂಕಗಳು, ಹಾಗೆಯೇ ಹರಿಣಿ ಎಸ್​ಎಂಬಿಎ ವಿಷಯಗಳಲ್ಲಿ 400ಕ್ಕೆ 400 ಅಂಕಗಳನ್ನು ಗಳಿಸಿರುವುದು ವಿಶೇಷ ಸಾಧನೆ ಎನಿಸಿದೆ.

ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ, ನಿರ್ದೇಶಕಿ ಪ್ರಿಯಾಪ್ರದಿಪ್​, ಪ್ರಾಚಾರ್ಯ ನವೀನ್​ಕುಮಾರ್​ ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.

ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಫಲಿತಾಂಶ ತೃಪ್ತಿ ತಂದಿದೆ. ನಾವು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದರ ಫಲವಾಗಿ ಫಲಿತಾಂಶ ಬಂದಿದ್ದು, ಇದಕ್ಕೆ ಕಾರಣರಾದ ವಿದ್ಯಾರ್ಥಿಗಳ, ಬೋಧನೆ ಮಾಡಿದ ಉಪನ್ಯಾಸಕರ ಅಭಿನಂದನಾರ್ಹರು.

ಎನ್​.ಬಿ.ಪ್ರದಿಪ್​ ಕುಮಾರ್​

ಕಾರ್ಯದರ್ಶಿ, ವಿದ್ಯಾವಾಹಿನಿ ಸಮೂಹ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net