ಮೂಡುಗಿಳಿಯಾರು ಶಾಲೆಯಲ್ಲಿ ವಿದ್ಯಾರ್ಥಿಮಿತ್ರ ಬಿಡುಗಡೆ

mudugiliyar
ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಮೂಡುಗಿಳಿಯಾರು ಶಾಲಾ ಸಭಾಂಗಣದಲ್ಲಿ ವಿಜಯವಾಣಿ ವಿದ್ಯಾರ್ಥಿಮಿತ್ರವನ್ನು ರೋಟರಿ ಕ್ಲಬ್, ಕೋಟ-ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ ಬಿಡುಗಡೆಗೊಳಿಸಿದರು
Published on

ಕೋಟ: ಮೂಡುಗಿಳಿಯಾರು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಸಭಾಂಗಣದಲ್ಲಿ ವಿಜಯವಾಣಿ ವಿದ್ಯಾರ್ಥಿಮಿತ್ರ ಆವೃತ್ತಿ ಬಿಡುಗಡೆ ಮಂಗಳವಾರ ನೆರವೇರಿತು. ರೋಟರಿ ಕ್ಲಬ್, ಕೋಟ-ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ ವಿಜಯವಾಣಿ ವಿದ್ಯಾರ್ಥಿಮಿತ್ರ ಬಿಡುಗಡೆಗೊಳಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗುವ ವಿಧಾನಗಳ ಕುರಿತು, ರೋಟರಿ ಗ್ರಾಮೀಣ ದಳ, ಗಿಳಿಯಾರು ಅಧ್ಯಕ್ಷ ಗೋಪಾಲ ಜಿ. ವಿದ್ಯಾರ್ಥಿಗಳಲ್ಲಿ ಜೀವನದಲ್ಲಿ ಎದುರಾಗುವ ಸವಾಲು ಹಾಗೂ ಅವುಗಳನ್ನು ಎದುರಿಸುವ ಕುರಿತು ಮಾಹಿತಿ ನೀಡಿದರು.

ರೋಟರಿ ಗ್ರಾಮೀಣ ದಳ, ಸಂಸ್ಥೆ ಪ್ರಭಾರ ಮುಖ್ಯ ಶಿಕ್ಷಕ ಅಶೋಕ ಸೋಮಯಾಜಿ ಎಲ್ಲ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ದಿನಪತ್ರಿಕೆ ವರ್ಷಪೂರ್ತಿ ಉಚಿತವಾಗಿ ಹಂಚುವ ರೋಟರಿ ಕ್ಲಬ್, ಕೋಟ-ಸಾಲಿಗ್ರಾಮ ಹಾಗೂ ರೋಟರಿ ಗ್ರಾಮೀಣ ದಳ, ಗಿಳಿಯಾರು ಇವರ ಸಹಕಾರಕ್ಕೆ ಅಭಿನಂದನೆ ತಿಳಿಸಿದರು. ಗಿಳಿಯಾರು ಸಭಾಪತಿ ಶರಣಯ್ಯ ಹಿರೇಮಠ್, ಹಳೇ ವಿದ್ಯಾರ್ಥಿ ಅಶೋಕ ಶೆಟ್ಟಿ, ಇಂಟರಾಕ್ಟ್ ಅಧ್ಯಕ್ಷ ಕುಮಾರ ಪೃಥ್ವಿರಾಜ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶೇಖರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net