ವಿದ್ಯಾನಿಧಿ ಜೆಇಇ ಸಾಧನೆ

JEE_Vidyanidhi_New
Published on

ತುಮಕೂರು: ಜೆಇಇ ಮೈನ್ಸ್​ ಮೊದಲ ಹಂತದ ಫಲಿತಾಂಶವು ಮಂಗಳವಾರ ಪ್ರಕಟಗೊಂಡಿದ್ದು ವಿದ್ಯಾನಿಧಿ ಕಾಲೇಜಿನ 130ಕ್ಕು ಹೆಚ್ಚು ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಜನವರಿ ಕೊನೆಯ ವಾರದಲ್ಲಿ ನಡೆದ ಪರೀಕ್ಷೆಗೆ ದೇಶಾದ್ಯಂತ 13,11,544 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, 12,58,136 ಪರೀಕ್ಷೆ ಬರೆದಿದ್ದರು.

ಐಐಟಿಗಳಲ್ಲಿ ಪ್ರವೇಶಾತಿ ಪಡೆದು ಎಂಜಿನಿಯರಿಂಗ್​ ವಿದ್ಯಾಭ್ಯಾಸವನ್ನು ಪಡೆಯಲು ಅಗತ್ಯವಿರುವ, ರಾಷ್ಟ್ರ ಮಟ್ಟದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ಸ್​ನ ಮೊದಲ ಹಂತದಲ್ಲಿ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳಾದ ಸಿರಿ ಕೊಂಡ ಶೇ.99.97, ನಿತಿಶ್​ ಪ್ರಕಾಶ್​ ಶೇ.99.01, ಪಿ.ರೋಹನ್​ ಶೇ.98.96, ಎಸ್​.ಕುಶಾಲ ಶೇ.98.38 ಮತ್ತು ಕೆ.ಎಲ್​.ಜೀವನ್​ ಶೇ.96.74 ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ತೋರಿದ್ದಾರೆ. ಒಟ್ಟು 15 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆಗಳ ಪೈಕಿ ಜೆಇಇ ಮೈನ್ಸ್​ ಎಂಬುದು ಅತ್ಯಂತ ಕಠಿಣವೇ ಹೌದು. ನಮ್ಮ ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮುಂದಿನ ಹಂತಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯೆನಿಸಿದೆ. ಮುಂದಿನ ದಿನಗಳಲ್ಲಿ ಜೆಇಇ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿ ಎಂಬುದು ನಮ್ಮ ಆಶಯ ಮತ್ತು ಗುರಿ. ತನ್ಮೂಲಕ ಪೋಷಕರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸವನ್ನು ನಿಜವಾಗಿಸಿದ್ದೇವೆಂಬ ಸಂತೃಪ್ತಿಯಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್​.ಬಿ. ಪ್ರದಿಪ್​ ಕುಮಾರ್​ ತಿಳಿಸಿದರು.

ಏ.1 ರಿಂದ 8ರವರೆಗೆ ನಡೆಯಲಿರುವ ಜೆಇಇ ಮೈನ್ಸ್​ ನ ಎರಡನೇ ಹಂತದ ಪರೀಕ್ಷೆಗೆ ಫೆ. 10 ರಿಂದ 25 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net