ವಿಧಾನಪರಿಷತ್​ನಲ್ಲಿ ಟಗರು ಕಾಳಗ

KS ESHWARAPPA
Published on

ವಿಧಾನಪರಿಷತ್​ನಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಸಚಿವ ಕೆ.ಎಸ್.ಈಶ್ವರಪ್ಪ ಉತ್ತರಿಸುತ್ತಿದ್ದಾಗ, ಮಧ್ಯದಲ್ಲಿ ಎದ್ದು ನಿಂತ ಎಚ್.ಎಂ.ರೇವಣ್ಣ ಮತ್ತೊಂದು ಪ್ರಶ್ನೆ ಕೇಳಲು ಮುಂದಾದರು. ಅದಕ್ಕೆ ಈಶ್ವರಪ್ಪ, ‘ಕೆಳಮನೆಯಲ್ಲಿ ದೊಡ್ಡ ಟಗರು (ಸಿದ್ದರಾಮಯ್ಯ), ಮೇಲ್ಮನೆಯಲ್ಲಿ ಚಿಕ್ಕ ಟಗರು (ಎಚ್.ಎಂ.ರೇವಣ್ಣ) ಸಹವಾಸ ಸಾಕಾಗಿದೆ ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.

ಆಗ ಜೆಡಿಎಸ್​ನ ಸದಸ್ಯರೊಬ್ಬರು, ಎಷ್ಟೇ ಆದರೂ ನೀವೆಲ್ಲ ಒಂದೇ ಅಲ್ಲವೇ? ಎಂದು ಕಿಚಾಯಿಸಿದರು. ಅದಕ್ಕೆ ಈಶ್ವರಪ್ಪ, ನಾವೆಲ್ಲರೂ ಒಂದೇ. ಕುರುಬರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಅಲ್ಲದೆ, ನಾವು ಹಿಂದುಗಳೆಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ, ನೀವು ಹಿಂದು ಧರ್ಮದಿಂದಲೇ ಹೊರ ಹೋಗಬೇಕೆಂದವರು. ಕುರುಬರ ಬಗ್ಗೆ ಮಾತನಾಡುತ್ತೀರಾ? ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net