

ಕಾರವಾರ: ಔಷಧ ಕೊಂಡೊಯ್ಯಲು, ಫಿಜ್ಜಾ ಡಿಲೆವರಿಗೆ ಡ್ರೋನ್ ಬಳಕೆ ಕೇಳಿದ್ದೇವೆ. ಈಗ ಬೀಜ ಬಿತ್ತನೆಗೂ ಡ್ರೋನ್ ಬಳಕೆ ಮಾಡಲಾಗುತ್ತಿದೆ.
ಉತ್ತರ ಕನ್ನಡ ಅರಣ್ಯ ಇಲಾಖೆ ಈ ಹೊಸ ಪ್ರಯೋಗ ಮಾಡಿದೆ. ಮಾನವ ಹೋಗಲಾರದ ಪ್ರದೇಶಗಳಿಗೆ ಡ್ರೋನ್ ಮೂಲಕ ಬೀಜ ಬಿತ್ತಲಾಗುತ್ತಿದೆ.
ಉತ್ತರ ಕನ್ನಡದಲ್ಲಿ ಗುಡ್ಡ ಕುಸಿತ ಹೆಚ್ಚುತ್ತಿದ್ದು, ಅದರನ್ನು ನಿಯಂತ್ರಿಸುವ ಭಾಗವಾಗಿ ಇಳಿಜಾರು ಪ್ರದೇಶಗಳಲ್ಲೂ ಬೀಜ ಬಿತ್ತುವ ಕಾರ್ಯ ಮಾಡಲಾಗುತ್ತಿದೆ.
ಇದುವರೆಗೆ ಜಿಲ್ಲೆಯಲ್ಲಿ 120 ಹೆಕ್ಟೇರ್ ಭೂ ಕುಸಿತ ಉಂಟಾಗಿದ್ದು, 100 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 2 ಸಾವಿರದಷ್ಟು ಅರಣ್ಯ ವೃಕ್ಷಗಳ ಬೀಜ ಬಿತ್ತನೆ ಮಾಡಲಾಗಿದೆ.