Video-ದಾಂಡೇಲಿ ಹೆದ್ದಾರಿಯಲ್ಲಿ ವಾಕಿಂಗ್ ಹೊರಟ ಮೊಸಳೆ:ಜನ ಕಂಗಾಲು

IMG-20220919-WA0037.jpg
Published on

ವಿಜಯವಾಣಿ ಸುದ್ದಿಜಾಲ ದಾಂಡೇಲಿ ಮೊಸಳೆಯೊಂದು ದಾಂಡೇಲಿ ರಸ್ತೆಯಲ್ಲಿ ಓಡಾಟ ನಡೆಸಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ದಾಂಡೇಲಿಯ ಕೆರವಾಡ ಶ್ರೇಯಸ್ ಪೇಪರ್ ಮಿಲ್ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಮೊಸಳೆಯೊಂದು ಹಾದು ಹೋಗುವ ದೃಶ್ಯದ ವಿಡಿಯೋ ವೈರಲ್ ಆಗಿದೆ.
ದಾಂಡೇಲಿಗೆ ಮೊಸಳೆಗಳು ಹೊಸದಲ್ಲ. ಕಾಳಿ ನದಿಯಲ್ಲಿ ದಶಕಗಳಿಂದ ಇವೆ. ದಾಂಡೇಲಿಯಲ್ಲಿ ಮೊಸಳೆ ಪಾರ್ಕ್  ಕೂಡ ಇದೆ‌. ಆದರೆ ಇತ್ತೀಚೆಗೆ ಮೊಸಳೆಗಳು ನರ ಭಕ್ಷಕರಾಗಿರುವುದು ಜನರಲ್ಲಿ ಭಯ ಹುಟ್ಟಿಸುತ್ತಿವೆ. ಕಳೆದ ಒಂದುವರೆ ವರ್ಷದಲ್ಲಿ ಮೊಸಳೆಗಳು ನಾಲ್ವರನ್ನು ಎಳೆದೊಯ್ದು ತಿಂದಿವೆ. ಮೊಸಳೆಗಳಿಗೆ ಬಲಿಯಾದ ಜಾನುವಾರುಗಳಿಗೆ ಲೆಕ್ಕವಿಲ್ಲ. ಈ ಹಿಂದೆಯೂ ಮೊಸಳೆ ಹಳೇ ದಾಂಡೇಲಿಯಲ್ಲಿ ಓಡಾಟ ನಡೆಸಿತ್ತು. ಈಗ ಮೊಸಳೆ ವಾಕಿಂಗ್ ನ ಎರಡನೇ ದೃಶ್ಯ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net