ಕನಕಪುರ: ಪ್ರೀತಿಸಿದ ಯುವತಿಗೆ ಬೇರೆಯವರೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಕುಪಿತಗೊಂಡ ಪ್ರೇಮಿಯೊಬ್ಬ ಯುವತಿಯೊಂದಿಗಿರುವ ವಿಡಿಯೋ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೊಸದುರ್ಗ ಗ್ರಾಮದ 20 ವರ್ಷದ ಯುವಕ ಈ ಕೃತ್ಯವೆಸಗಿದವ ಎನ್ನಲಾಗಿದ್ದು ಇದರಿಂದ ಬೇಸರಗೊಂಡ ಯುವತಿ, ಈ ದೃಶ್ಯ ನನ್ನದಲ್ಲ, ನನ್ನ ಘನತೆಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ನಕಲಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಯುವಕ, ಆತನ ತಂದೆ ಹಾಗೂ ಆ ಮನೆಯ ಮತ್ತೊಬ್ಬ ಸದಸ್ಯನ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.