ವಿಭುಶಂಕರ ಸಭಾಭವನ ಲೋಕಾರ್ಪಣೆ

vibhu
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಸೂರಾಲು ವಲಯ ವಿಪ್ರ ಟ್ರಸ್ಟ್ ಆಶ್ರಯದಲ್ಲಿ ಚೇರ್ಕಾಡಿ ಗ್ರಾಮ ಪೇತ್ರಿಯಲ್ಲಿ ನಿರ್ಮಾಣಗೊಂಡ ವಿಭುಶಂಕರ ಸಭಾಭವನದ ಉದ್ಘಾಟನೆ ಮಾ.27ರಂದು ಮಧ್ಯಾಹ್ನ 3ಕ್ಕೆ ನೆರವೇರಲಿದೆ.

ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಲೋಕಾರ್ಪಣೆಗೊಳಿಸುವರು. ವಿಪ್ರ ಟ್ರಸ್ಟ್ ಅಧ್ಯಕ್ಷ ಕೆ.ಮಂಜುನಾಥ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಶೃಂಗೇರಿ ಶ್ರೀ ಶಾರದಾ ಪೀಠಂನ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ್ ಅಡಿಗ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಎ.ಸುವರ್ಣ, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ನಾಗರಾಜ್ ಶೆಟ್ಟಿ, ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಅಶೋಕ್ ಭಟ್, ಗ್ರಾಪಂ ಅಧ್ಯಕ್ಷ ನಾರಾಯಣ ನಾಯ್ಕ, ಹೊಸೂರು ಕರ್ಜೆಯ ಕೃಷಿಕ ಮಂಜುನಾಥ ಗೋಳಿ, ವೈದ್ಯೆ ಡಾ.ರಾಗಿಣಿ ಬೇಕೂರು ಅತಿಥಿಗಳಾಗಿರುವರು. ಈ ಸಂದರ್ಭ ದಾನಿಗಳಿಗೆ ಸನ್ಮಾನ par ನಡೆಯಲಿದೆ.

ಸೂರಾಲು ವಲಯ ವಿಪ್ರ ಟ್ರಸ್ಟ್

ತಾಲೂಕಿನ ಪೂರ್ವ ಭಾಗದ ಎಂಟು ಗ್ರಾಮಗಳ ವ್ಯಾಪ್ತಿಯಲ್ಲಿ ಬ್ರಾಹ್ಮಣ ಸಮುದಾಯದ ಕುಟುಂಬಗಳನ್ನು ಒಗ್ಗೂಡಿಸಿಕೊಂಡು 1996ರಲ್ಲಿ ಸಂಘ ಪ್ರಾರಂಭವಾಯಿತು. ಪ್ರಥಮ ಬಾರಿ ವಿದ್ವಾನ್ ಸೂರಾಲು ಪರಮೇಶ್ವರ ಭಟ್ ಅಧ್ಯಕ್ಷರಾಗಿದ್ದು, ಸೀತಾರಾಮ ಅಡಿಗ ಕೋರ್ಚಿಬೆಟ್ಟು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಹಿರಿಯರಾದ ಮಂಜುನಾಥ ಹೆಬ್ಬಾರ್ ಅಧ್ಯಕ್ಷತೆಯಲ್ಲಿ  ಕಾರ್ಯನಿರ್ವಹಿತ್ತಿದೆ.

ವ್ಯವಸ್ಥಿತ ಮೂಲಸೌಕರ್ಯ

ಸೂರಾಲು ವಲಯದ 10 ಕಿ.ಮೀ. ವ್ಯಾಪ್ತಿಯ ಎಲ್ಲ ಸಮುದಾಯದವರ ಅವಶ್ಯಕತೆ ಮನಗಂಡು ಪೇತ್ರಿಯಲ್ಲಿ 10 ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ಸಭಾಭವನ ನಿರ್ಮಿಸಲಾಗಿದೆ. ಮಂಜುನಾಥ ಹೆಬ್ಬಾರ್ ಸ್ಥಳ ದಾನ ಮಾಡಿದ್ದು, 8 ಸಾವಿರ ಚದರ ಅಡಿ ವಿಸ್ತೀರ್ಣದ ಎರಡು ಮಹಡಿಯ ಕಟ್ಟಡ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ವ್ಯವಸ್ಥಿತ ಮೂಲಸೌಕರ್ಯಗಳೊಂದಿಗೆ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಲಾಗಿದೆ. ಪರಿಸರದ ಎಲ್ಲ ಸಮುದಾಯದವರು ಸಭೆ, ಸಮಾರಂಭ ಆಯೋಜಿಸಲು ಅತ್ಯಂತ ಪ್ರಶಸ್ತ ಸ್ಥಳವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net