

ಉಡುಪಿ: ಭಾರತೀಯ ರಕ್ಷಣಾ ಇಲಾಖೆಗೆ ಜಾಗ ಹಂಚಿಕೆ ಬಗ್ಗೆ ವಾಯುಪಡೆಯ ಏರ್ ಮಾರ್ಷಲ್ ಮಣಿಕಂಠ ಅವರು ಮಂಗಳವಾರ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರನ್ನು ಭೇಟಿ ಮಾಡಿ, ಚರ್ಚಿಸಿದರು.
ರಕ್ಷಣಾ ಇಲಾಖೆ ಅಧೀನದಲ್ಲಿದ್ದ ಆದಿಉಡುಪಿಯ ಹೆಲಿಪ್ಯಾಡ್ನ 6 ಎಕ್ರೆ ಜಾಗವನ್ನು 2019ರಲ್ಲಿ ಜಿಲ್ಲಾಡಳಿತ ವಾಪಾಸು ಪಡೆದಿದ್ದು, ನಗರದ ಹೃದಯಭಾಗದಲ್ಲಿರುವ ಹೆಲಿಪ್ಯಾಡ್ ಗಣ್ಯರ ಓಡಾಟಕ್ಕೆ ಅತೀ ಅಗತ್ಯವಾಗಿರುವುದರಿಂದ ಇದಕ್ಕೆ ಪರ್ಯಾಯವಾಗಿ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಸರ್ಕಾರಿ ಜಾಗ ಮಂಜೂರುಗೊಳಿಸಿತ್ತು. ಸ್ಥಳಕ್ಕೆ ಭೇಟಿ ನೀಡಿದ ಏರ್ ಮಾರ್ಷಲ್ ಮಣಿಕಂಠ ಅವರು ಖುದ್ದು ಪರಿಶೀಲನೆ ನಡೆಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ವಾಯುಪಡೆಯ ಆಡಳಿತಾಧಿಕಾರಿ ಪಿ.ಎ ಶೈಲೇಶ್ ಕುಮಾರ್, ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗಡೆ ಉಪಸ್ಥಿತರಿದ್ದರು.