ಹಿಂದುಗಳ ಹತ್ಯೆ ಖಂಡಿಸಿ ವಿಎಚ್​ಪಿ ಪ್ರತಿಭಟನೆ

7 ANG 2
Published on

ಅಣ್ಣಿಗೇರಿ: ಕಾಶ್ಮೀರದ ಪಗಲ್ಗಾಮ್ಲ್ಲಿ ಭಯೋತ್ಪಾದಕರಿಂದ ನಡೆದ ಹಿಂದುಗಳ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರು ನಗರದ ಕಿತ್ತೂರು ಚನ್ನಮ್ಮ ವೃತ್ತದಿಂದ ಅಮೃತೇಶ್ವರ ದೇವಸ್ಥಾನದ ಮುಂಭಾಗದವರೆಗೆ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಬರ್ತೆಶ ಜೈನ ಮಾತನಾಡಿ, ಕಾಶ್ಮೀರ ಕಣಿವೆಯಲ್ಲಿ ಹಿಂದು ಧರ್ವಿುಯರನ್ನು ಗುರಿಯಾಗಿಸಿಕೊಂಡು ಮತಾಂಧ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಇದು ಖಂಡನೀಯ ಎಂದರು.

ನಂತರ ಪ್ರತಿಭಟನಾಕಾರರು ಬೋಲೋ ಭಾರತ ಮಾತಾಕೀ ಜೈ ಎಂದು ಘೊಷಣೆ ಕೂಗುತ್ತಾ ಪಂಜಿನ ಮೆರವಣಿಗೆ ನಡೆಸಿದರು. ನಂತರ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಉಗ್ರ ಕೃತ್ಯದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಮಹೇಶ ಸುಣಗಾರ, ಚೇತನ ರೌತರ್, ರವಿಕುಮಾರ ದಿಡ್ಡಿ, ಗಂಗೂ ಬಿಲ್ಲದನವರ, ರವಿ ದಳವಾಯಿ, ಸಚಿನ್ ಮುಂಡರಗಿ, ಮಹಾಂತೇಶ ಸಾಲಿಮಠ, ವಿಶ್ವ ಆರಾಧ್ಯಮಠ, ಮಂಜು ನಾವಳ್ಳಿ, ಕಿರಣ ಅಂಗಡಿ, ಹರೀಶ ಜನಗಲ್, ಕಲ್ಲಪ್ಪ ಬಿಲ್ಲದನ್ನವರ್, ಅಮೃತ ಕರೆಕಲ್, ಕುಮಾರ ಲಕ್ಷ್ಮೇಶ್ವರ, ಮಾಂತೂ ಅಕ್ಕಿ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net