ಹಿರಿಯ ಕಾಂಗ್ರೆಸ್ಸಿಗ ರೆಡ್ಡಿ ಚಿನ್ನಯಲ್ಲಪ್ಪ ಇನ್ನಿಲ್ಲ

Reddy_Chinnayellappa
Published on

ತುಮಕೂರು: ಹಿರಿಯ ಕಾಂಗ್ರೆಸ್​ ಮುಖಂಡ, ನಗರ ಸಭೆ ಮಾಜಿ ಅಧ್ಯಕ್ಷ, ಟೂಡಾ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ( 74) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಬೆಂಗಳೂರಿನ ಪುತ್ರಿ ನಿವಾಸದಲ್ಲಿ ಜು.29ರಂದು ಜಾರಿಬಿದ್ದಿದ್ದ ರೆಡ್ಡಿ ಚಿನ್ನಯಲ್ಲಪ್ಪಗೆ ತಲೆಗೆ ತೀವ್ರ ಪೆಟ್ಟುಬಿದ್ದಿತ್ತು. ತಕ್ಷಣ ಅವರನ್ನು ನಾರಾಯಣಹೃದಯಾಲಯಕ್ಕೆ ಸೇರಿಸಲಾಗಿದ್ದು ಚಿಕಿತ್ಸೆ ಲಕಾರಿಯಾಗದೆ ಸೋಮವಾರ ಕೊನೆಯುಸಿರೆಳದಿದ್ದಾರೆ.

ಅಂತಿಮ ದರ್ಶನ ವ್ಯವಸ್ಥೆ: ಮಂಗಳವಾರ ಬೆಳಗ್ಗೆ ಹನುಮಂತಪುರ ಬೈಪಾಸ್​ ರಸ್ತೆಯ ಮೃತರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಯಂಗ್​ ರ್ಟಕ್​: 1970ರ ದಶಕದಲ್ಲಿ ವಿದ್ಯಾರ್ಥಿ ದಿಸೆಯಲ್ಲಿ ನಾಯಕರಾಗಿ ಗುರುತಿಸಲ್ಪಟ್ಟ ರೆಡ್ಡಿ ಚಿನ್ನಯಲ್ಲಪ್ಪ ಅಂದಿನ ಲೋಕಸಭಾ ಸದಸ್ಯ ಕೆ.ಲಕ್ಕಪ್ಪ ಆಪ್ತರಾಗಿ ಕಾಂಗ್ರೆಸ್​ ಪಕ್ಷದ ಸಕ್ರೀಯ ಕಾರ್ಯಕರ್ತರಾದರು. ಜಿಲ್ಲಾ ಯುವ ಕಾಂಗ್ರೆಸ್​ ಅಧ್ಯಕ್ಷರಾದ ಬಳಿಕ ರೆಡ್ಡಿ ಚಿನ್ನಯಲ್ಲಪ್ಪ ಸಂಟನಾ ಚತುರರಾಗಿ ಹೊರಹೊಮ್ಮಿದರು. 1983ರಲ್ಲಿ ಶ್ರೀರಾಮನಗರ ವಾರ್ಡ್​ನಿಂದ ನಗರಸಭೆ ಪ್ರವೇಶಿಸಿ, 84ರಲ್ಲಿ ನಗರಸಭಾ ಅಧ್ಯಕ್ಷರಾದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ರೆಡ್ಡಿ ಚಿನ್ನಯಲ್ಲಪ್ಪ 2000ದಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡರು. ಆನಂತರ ಮತ್ತೆ ರಾಜಕೀಯ ಸ್ಥಾನಮಾನ ದೊರೆಯದೆ ಪಕ್ಷದಲ್ಲಿ ಕಡೆಗಣಿಸಲ್ಪಟ್ಟರು. ಚಿತ್ರರಂಗದ ನಂಟು ಇತ್ತು. ಕಾಲೇಜುರಂಗ, ಲಿತಾಂಶ ಚಿತ್ರದಲ್ಲು ರೆಡ್ಡಿ ಚಿನ್ನಯಲ್ಲಪ್ಪ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net