ಜನರ ಸಮಸ್ಯೆಗೆ ಶ್ರೀ ಪರಿಹಾರ ಡಿಕೆ ಶಿವಕುಮಾರ್​

1 KKP 5
Published on

* ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿಎಂ ಅಧಿಕಾರಿಗಳಿಗೆ ಸೂಚನೆ

ಕನಕಪುರ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಭಾನುವಾರ ನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಸಮಸ್ಯೆಗಳ ಮಹಾಪೂರವೇ ಹರಿದುಬಂತು.

ನಗರ ಹಾಗೂ ತಾಲೂಕಿನ ಹಲವು ಸಮಸ್ಯೆಗಳನ್ನು ಒಳಗೊಂಡ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಪ್ರಮುಖವಾಗಿ ನಿವೇಶನ, ಮನೆ ನಿರ್ಮಾಣ, ಸ್ಮಶಾನಕ್ಕಾಗಿ ಜಮೀನು ಮೀಸಲು, ಸ್ಮಶಾನ ಅಭಿವೃದ್ಧಿ ಹಾಗೂ ಪ್ರಸಕ್ತ ವರ್ಷ ತಾಲೂಕಿನಲ್ಲಿ ಮಳೆ ಕೊರತೆ ಹೆಚ್ಚಾಗಿದ್ದು, ಕೂಡಲೇ ಕೆರೆಗಳನ್ನು ತುಂಬಿಸುವಂತೆ ರೈತರು ಅರ್ಜಿಗಳನ್ನು ಸಲ್ಲಿಸಿದರು. ಉದ್ಯೋಗ, ಆರೋಗ್ಯಕ್ಕೆ ನೆರವು ನೀಡುವಂತೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಆಗದೇ ಇರುವ ಕೆಲಸಗಳನ್ನು ಮಾಡಿಸಿಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್​, ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸಬೇಡಿ. ಕೂಡಲೇ ನಿಯಮಾನುಸಾರವಾಗಿ ಕೆಲಸ ಮಾಡಿಕೊಡುವಂತೆ ಸೂಚಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ತಾಲೂಕಿನ ಜನತೆ ಬೆಂಗಳೂರಿಗೆ ಬಂದು ನನ್ನನ್ನು ಕಾಯುವುದು ಬೇಡ ಎನ್ನುವ ನಿಟ್ಟಿನಲ್ಲಿ ಸ್ವೇತ್ರ ಕನಕಪುರದಲ್ಲಿ ಜನಸ್ಪಂದನ ಸಭೆ ನಡೆಸಿ, ಸಮಸ್ಯೆ ಆಲಿಸಲಾಗಿದೆ ಎಂದರು.‘

ಶ್ರೀದಲ್ಲಿಯೇ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕನಕಪುರದಲ್ಲಿ ಪ್ರತಿ ತಿಂಗಳು 2ನೇ ಮತ್ತು 4ನೇ ಶನಿವಾರ ೇತ್ರದ ಜನರಿಗೆ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ಜಿಲ್ಲಾ ವಿಶೇಷಚೇತನ ಕಲ್ಯಾಣಾಧಿಕಾರಿ ಕೆ.ವಿ.ಜ್ಯೋತಿ, ವಿಧಾನ ಪರಿಷತ್​ ಸದಸ್ಯ ಎಸ್​.ರವಿ, ಮುಖಂಡರಾದ ಆರ್​.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವ್​, ಎಸ್​.ಎಸ್​.ಶಂಕರ್​, ಪುರುಷೋತ್ತಮ್​, ಕೆ.ಎನ್​.ದಿಲೀಪ್​ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

ಕನ್ನಡಿಗರಿಗೆ ಅನ್ಯಾಯ?!

ಕೆಪಿಎಸ್​ಸಿ ಪರೀಕ್ಷೇಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ವಿಚಾರ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಸಚಿವರು ಈ ಬಗ್ಗೆ ಕ್ರಮವಹಿಸುತ್ತಾರೆ. ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಡಿಕೆಶಿ ಹೇಳಿದರು.

ತಾಲೂಕಿನ ಸುತ್ತಲೂ ಅರಣ್ಯ ಪ್ರದೇಶ ಹೊಂದಿಕೊಂಡಿರುವುದರಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಬೆಳೆನಾಶದ ಜತೆಗೆ ಸಾವು&ನೋವು ಹೆಚ್ಚಾಗುತ್ತಿವೆ. ಕಾಡಾನೆಗಳು ಗ್ರಾಮಗಳ ಬಳಿಯೇ ಬರುತ್ತಿವೆ. ಈ ಬಗ್ಗೆ ಈಗಾಗಲೇ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್​ಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಡಿಕೆಶಿ ಸಮ್ಮುಖದಲ್ಲೇ ಮಾತಿನ ಚಕಮಕಿ

ಜನಸ್ಪಂದನದಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಸಮ್ಮುಖದಲ್ಲಿ ನಲ್ಲಹಳ್ಳಿಯಲ್ಲಿ ದಾರಿಯ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಎರಡು ತಲೆಮಾರಿನಿಂದ ನಲ್ಲಳ್ಳಿಯಲ್ಲಿ ವಾಸ ಮಾಡುತ್ತಿರುವ ಚಂದ್ರೇಗೌಡ, ಕರಿಗುಂಡೇಗೌಡ, ಬೊಮ್ಮೇಗೌಡ ಮಹದೇವ್​, ಕೆಂಪಮ್ಮ ಎಂಬುವರು ಪಿತ್ರಾರ್ಜಿತವಾಗಿ ಬಂದಿರುವ ದಾರಿಯಲ್ಲಿ ಓಡಾಡುತ್ತಿದ್ದರು. ಗ್ರಾಮದ ಕುಟುಂಬವೊಂದು ತೊಂದರೆ ನೀಡುತ್ತಿದ್ದು, ಈ ಸಂಬಂಧ ಗ್ರಾಮದಲ್ಲಿ ರಾಜಿ, ಪಂಚಾಯಿತಿ ನಡೆದೂ ಸಾತನೂರು ಠಾಣೆಯಲ್ಲಿ ದೂರು&ಪ್ರತಿ ದೂರುಗಳಾಗಿವೆ. ಈ ವಿಚಾರ ನ್ಯಾಯದಲ್ಲಿದ್ದರೂ ನಮಗೆ ಇಲ್ಲಿ ಓಡಾಡಲು ಬಿಡುತ್ತಿಲ್ಲವೆಂದು ಡಿಕೆಶಿ ಮುಂದೆ ದಾರಿಯ ವಿಚಾರದಲ್ಲಿ ಅವಲತ್ತುಕೊಂಡರು. ಈ ವೇಳೆ ಮಾತಿನ ಚಕಮಕಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net