ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋಗೆ ಅಭೂತಪೂರ್ವ ಸ್ಪಂದನೆ; ಸಿಎಂ ಭೇಟಿ: ಆರ್ಥಿಕತೆ ಚೇತರಿಕೆಗೆ ಎಕ್ಸ್​ಪೋ ಉತ್ತೇಜನಕಾರಿ ಎಂದು ಬಣ್ಣನೆ

expo
ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ‘ಪ್ರಾಪರ್ಟಿ ಎಕ್ಸ್​ಪೋ’ದ ಮಳಿಗೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದರು. ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಇತರರು ಇದ್ದರು.
Published on

ಹುಬ್ಬಳ್ಳಿ: ನಿವೇಶನ, ಮನೆ, ಫ್ಲ್ಯಾಟ್, ವಿಲ್ಲಾ, ಫಾಮರ್್​ಹೌಸ್ ಇತ್ಯಾದಿಗಳನ್ನು ಕೊಳ್ಳುವವರಿಗೆ ಪೂರ್ಣ ವಿಶ್ವಾಸಾರ್ಹವಾದ ಸಮಗ್ರ ಮಾಹಿತಿ ಒಂದೇ ಕಡೆ ದೊರೆಯಲಿ ಎಂಬ ಸದುದ್ದೇಶದಿಂದ ಕನ್ನಡದ ನಂ. 1 ಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ಆಯೋಜಿಸಿದ್ದ ಮೂರು ದಿನಗಳ ‘ಪ್ರಾಪರ್ಟಿ ಎಕ್ಸ್​ಪೋ’ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದೆನೆ ವ್ಯಕ್ತವಾಗಿದ್ದು, ಭಾನುವಾರ ಅದ್ದೂರಿಯಾಗಿ ತೆರೆ ಕಂಡಿತು. ವಾಣಿಜ್ಯ ನಗರಿ ಹುಬ್ಬಳ್ಳಿಯ ವಿದ್ಯಾನಗರದ ರಾಯ್ಕರ್ ಮೈದಾನದಲ್ಲಿ ಸಜ್ಜುಗೊಳಿಸಿದ್ದ ಹವಾನಿಯಂತ್ರಿತ ಬೃಹತ್ ಟೆಂಟ್​ನಲ್ಲಿ ಸರಣಿ ಮಳಿಗೆಗಳಿಗೆ ಭೇಟಿ ನೀಡಿದ ಆಸಕ್ತರು, ವಿವಿಧ ಡೆವಲಪರ್​ಗಳು ಹಾಗೂ ಬಿಲ್ಡರ್​ಗಳಿಂದ ಹಲವಾರು ಪ್ರಾಜೆಕ್ಟ್​ಗಳ ಪೂರ್ಣ ಮಾಹಿತಿ ಪಡೆದುಕೊಂಡರು. ಬ್ಯಾಂಕ್​ಗಳು, ಮೂಲ ಸೌಕರ್ಯ ಸಂಬಂಧಿ ಸಾಮಗ್ರಿಗಳ ಮಳಿಗೆಗಳೂ ಇದ್ದುದರಿಂದ ಒಂದೇ ಸೂರಿನಡಿ ಎಲ್ಲ ಮಾಹಿತಿ ದೊರಕುವಂತೆ ಮಾಡಿದ್ದನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಪ್ರಶಂಸಿದರು.

ಸಿಎಂ ಭೇಟಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭಾನುವಾರ ‘ಪ್ರಾಪರ್ಟಿ ಎಕ್ಸ್​ಪೋ’ಗೆ ಭೇಟಿ ನೀಡಿದರು. ಎಲ್ಲ ಮಳಿಗೆಗಳನ್ನು ವೀಕ್ಷಿಸಿದ ಮುಖ್ಯಮಂತ್ರಿಯವರು, ಈ ರೀತಿಯ ಎಕ್ಸ್​ಪೋಗಳಿಂದ ಆರ್ಥಿಕ ಚೇತರಿಕೆಗೆ ಉತ್ತೇಜನ ಲಭಿಸುತ್ತದೆ. ಕರೊನಾ ನಂತರ ಕುಸಿದಿದ್ದ ಆರ್ಥಿಕತೆ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇಂತಹ ಪ್ರದರ್ಶನಗಳ ಮೂಲಕ ಮತ್ತಷ್ಟು ಇಂಬು ನೀಡಬಹುದು ಎಂದರು. ರಾಜ್ಯದ ವಿವಿಧೆಡೆಯ ಜನರು ಪ್ರಾಪರ್ಟಿ ಎಕ್ಸ್​ಪೋಗೆ ಭೇಟಿ ನೀಡಿದ್ದು, ನಿವೇಶನ, ಮನೆಗಳನ್ನು ಬುಕ್ ಮಾಡಿರುವ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಎಕ್ಸ್​ಪೋ ಆಯೋಜಿಸುವಂತಾಗಲಿ ಎಂದು ಹಾರೈಸಿದರು. ವಿಜಯವಾಣಿ ಪತ್ರಿಕೆ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಹಾಗೂ ಜಾಹೀರಾತು ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವಾಜಿ ಭಿಸೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಸನ್ಮಾನಿಸಿದರು. ಕ್ರೆಡೈ ಸಂಯೋಜಿತ ರಾಜ್ಯ ಅಧ್ಯಕ್ಷ ಪ್ರದೀಪ ರಾಯ್ಕರ, ಶ್ರೀ ದುರ್ಗಾ ಡೆವಲಪರ್ಸ್ ಪ್ರಮೋಟರ್ಸ್ ಎಂಡಿ ವೀರೇಶ ಉಂಡಿ, ಸ್ಕೈಟೌನ್ ಗ್ರುಪ್ ಎಂಡಿ ಚೇತನ ಪವಾರ, ಪ್ರಕಾಶ ಅಸೋಸಿಯೇಟ್ಸ್ ಎಂಡಿ ಪ್ರಕಾಶ ಜೋಶಿ ಹಾಗೂ ಇತರರು ಇದ್ದರು.

ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರು ಕ್ರಿಯಾಶೀಲತೆಗೆ ಹೆಸರಾದವರು. ಅವರ ನೇತೃತ್ವದ ಸುದ್ದಿಸಂಸ್ಥೆಗಳು ಪ್ರಾಪರ್ಟಿ ಎಕ್ಸ್​ಪೋ ಆಯೋಜಿಸುವ ಮೂಲಕ ಈ ಭಾಗದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗೆ ವೇಗ ನೀಡಿವೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಹುರುಪು ಬಂದಂತಾಗಿದೆ. | ಬಸವರಾಜ ಬೊಮ್ಮಾಯಿ ಸಿಎಂ ಪ್ರಾಪರ್ಟಿ ಎಕ್ಸ್​ಪೋದಿಂದಾಗಿ ಗ್ರಾಹಕರಿಗೆ ನಿವೇಶನ, ಮನೆ, ಫ್ಲ್ಯಾಟ್ ಖರೀದಿ ಮತ್ತು ಮಾಹಿತಿ ಪಡೆಯಲು ಅನುಕೂಲವಾಗಿದೆ. ಬ್ಯಾಂಕ್​ಗಳು ಸಹ ಸಾಲ ಸೌಲಭ್ಯ ನೀಡಲು ಬಂದಿವೆ. ಒಂದೇ ಸೂರಿನಡಿ ಇವೆಲ್ಲವೂ ಲಭಿಸುವಂತೆ ಮಾಡಿರುವುದರ ಪೂರ್ಣ ಪ್ರಯೋಜನವನ್ನು ಜನಸಾಮಾನ್ಯರು ಪಡೆದುಕೊಂಡಿರುವುದು ಸಂತಸದ ಸಂಗತಿ. | ಶಂಕರ ಪಾಟೀಲ ಮುನೇನಕೊಪ್ಪ ಸಕ್ಕರೆ, ಜವಳಿ ಮತ್ತು ಕೈಮಗ್ಗ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net