More

    ಇಂಡಿಯಾ ಟ್ರೆಂಡಿಂಗ್​ನಲ್ಲಿ #DrRajkumar; ಡಾ.ರಾಜ್​ಗೆ ಜನ್ಮದಿನದ ಶುಭಾಶಯಗಳ ಸುರಿಮಳೆ..

    ಬೆಂಗಳೂರು: ಇಂದು ವರನಟ ಡಾ.ರಾಜಕುಮಾರ್ ಅವರ 94ನೇ ಜನ್ಮದಿನ. ಅವರ ಜನ್ಮದಿನಕ್ಕೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮಾತ್ರವಲ್ಲದೆ ಅಸಂಖ್ಯಾತ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.

    ಡಾ.ರಾಜಕುಮಾರ್​ ಅವರು ಅಗಲಿ 16 ವರ್ಷಗಳು ಕಳೆದರೂ ಅಭಿಮಾನದ ತೀವ್ರತೆ ಒಂಚೂರು ಕಡಿಮೆ ಆಗಿಲ್ಲ ಎಂಬುದಕ್ಕೆ ಇಂದಿನ ಶುಭಾಶಯಗಳ ಪ್ರಮಾಣವೇ ಸಾಕ್ಷಿ. ಏಕೆಂದರೆ ಇಂದು ಅವರಿಗೆ ಜನ್ಮದಿನದ ಶುಭಾಶಯ ಕೋರಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪ್ರಮಾಣದ ಮೆಸೇಜ್​ಗಳು ಪೋಸ್ಟ್ ಆಗಿದ್ದು, ಟ್ರೆಂಡಿಂಗ್ ಕೂಡ ಆಗಿದೆ.

    ಡಾ.ರಾಜಕುಮಾರ್​ ಅವರಿಗೆ ಟ್ವಿಟರ್​, ಫೇಸ್​​ಬುಕ್​, ಇನ್​ಸ್ಟಾಗ್ರಾಂ ಸೇರಿ ಹಲವಾರು ಸೋಷಿಯಲ್ ಮೀಡಿಯಾಗಳಲ್ಲಿ ಶುಭಾಶಯಗಳನ್ನು ಕೋರಲಾಗಿದೆ. ಅದರಲ್ಲೂ ಟ್ವಿಟರ್​ನಲ್ಲಿ ಬಹಳಷ್ಟು ಮಂದಿ ಶುಭಾಶಯದೊಂದಿಗೆ #DrRajkumar ಎಂಬ ಹ್ಯಾಷ್​ಟ್ಯಾಗ್​ ಸೇರಿಸಿ ಪೋಸ್ಟ್ ಮಾಡಿದ್ದು, ಅದು ಇಂಡಿಯಾ ಟ್ರೆಂಡಿಂಗ್​ ಆಗಿದೆ.

    ಇಂಡಿಯಾ ಟ್ರೆಂಡಿಂಗ್​ನಲ್ಲಿ #DrRajkumar; ಡಾ.ರಾಜ್​ಗೆ ಜನ್ಮದಿನದ ಶುಭಾಶಯಗಳ ಸುರಿಮಳೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts