ನಂದಿ ಬೆಟ್ಟಕ್ಕೆ ವಾಹನ ಸಂಚಾರ ರ್ನಿಬಂಧ

Untitled-2
Published on

ಚಿಕ್ಕಬಳ್ಳಾಪುರ: ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಮಾ.24ರಿಂದ ಏ.25ರವರೆಗೆ ವಾರಾಂತ್ಯದಲ್ಲಿ (ಶುಕ್ರವಾರ ಸಂಜೆ 6.30ರಿಂದ ಸೋಮವಾರ ಬೆಳಗ್ಗೆ 8ರವರೆಗೆ) ವಾಹನ ಸಂಚಾರಕ್ಕೆ ಜಿಲ್ಲಾಡಳಿತವು ರ್ನಿಬಂಧ ಹೇರಿದೆ.

ನಂದಿ ಗಿರಿಧಾಮದ ಮೋಟಾರು ರಸ್ತೆಯ ಸರಪಳಿ (0.00 ರಿಂದ 7.70 ಕಿಮೀ ವರೆಗಿನ ರಸ್ತೆ) ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರ ಸುಗಮ ಕಾರ್ಯ ನಿರ್ವಹಣೆಗೆ ತೊಡಕಾಗದಿರಲು, ಸಾರ್ವಜನಿಕ ಹಿತದೃಷ್ಟಿಯಿಂದ ವಾಹನ ಸಂಚಾರ ರ್ನಿಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ ಆದೇಶದಲ್ಲಿ ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ಹೆಚ್ಚಿನ ದಟ್ಟಣೆ: ಬೆಂಗಳೂರಿಗೆ ಸಮೀಪದಲ್ಲಿರುವ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ವಾರಾಂತ್ಯ, ಹಬ್ಬದ ವಿಶೇಷ ಹಾಗೂ ರಜೆ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ (ಸರಾಸರಿ ಕನಿಷ್ಠ 8ರಿಂದ ಗರಿಷ್ಠ 11 ಸಾವಿರ ಜನ) ಆಗಮಿಸುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಿ ಹೆಚ್ಚಿನ ಜನ ಮತ್ತು ವಾಹನ ಬರುವುದರಿಂದ ಸಂಚಾರ ಸಿಕ್ಕು ಉಂಟಾಗುತ್ತದೆ. ಪಾರ್ಕಿಂಗ್​ ಸ್ಥಳಗಳಲ್ಲಿ ನೂರಾರು ವಾಹನಗಳು ತುಂಬಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net