

ಸಿಂಧನೂರು: ಕೈಗಾರಿಕೀಕರಣ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ಹವಾಮಾನ ಕುಸಿತವಾಗಿದ್ದು, ಪರಿಸರ ಸಮತೋಲನಕ್ಕೆ ಗಿಡಗಳನ್ನು ಬೆಳೆಸುವುದು ಅಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಹೇಳಿದರು.
ನಗರದ ಟಿಬಿಪಿ ಕ್ಯಾಂಪಿನ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಸಸ್ಯ ಶ್ಯಾಮಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾಗತಿಕ ಮಟ್ಟದ ಹವಾಮಾನ ವೈಪರೀತ್ಯದಿಂದ ಮೇಘ ಸ್ಫೋಟವಾಗಿ ವಿಪರೀತ ಮಳೆಯಾಗುತ್ತದೆ. ಪರಿಸರ ಏರುಪೇರಿನಿಂದ ಸಾಕಷ್ಟು ಪ್ರಕೃತಿ ವಿಕೋಪಗಳು ನಡೆಯುತ್ತಿವೆ. ಒಂದೆಡೆ ಹೆಚ್ಚು ಮಳೆ, ಇನ್ನೊಂದೆಡೆ ಮಳೆಯೇ ಆಗುವುದಿಲ್ಲ. ಈ ಭಾಗದಲ್ಲಿ ಬೇಸಿಗೆಯಲ್ಲಿ 42 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಇರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗಿಡಗಳು ಬೆಳೆಸುವುದರಿಂದ ಆಮ್ಲಜನಕ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಇದರಿಂದ ಆರೋಗ್ಯ ಸುಧಾರಿಸಲಿದೆ. ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಡಿವೈಎಸ್ಪಿ ಬಿ.ಎಸ್.ತಳವಾರ್, ಅರಣ್ಯಾಧಿಕಾರಿ ರಾಜಕುಮಾರ, ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ದೈಹಿಕ ಶಿಕ್ಷಣಾಧಿಕಾರಿ ವಿಜಯ ರಂಗಾರೆಡ್ಡಿ, ವಿಠ್ಠಲರಾವ್, ಸಿಆರ್‌ಪಿ ಚನ್ನವೀರನಗೌಡ, ಎಸ್ಡಿಎಂಸಿ ಅಧ್ಯಕ್ಷ ಪ್ರವೀಣಕುಮಾರ, ಸಮನ್ವಯಾಧಿಕಾರಿ ಬಸವಲಿಂಗಪ್ಪ ಹುಡೇದ್, ಶಿಕ್ಷಕರಾದ ಅಮರಯ್ಯ ಶಾಸ್ತ್ರೀ, ಗಂಗಾಧರ, ಅಂಬೋಜಿ ಪವಾರ್ ಇನ್ನಿತರರಿದ್ದರು.