ಸುಗಮ ಸಂಚಾರಕ್ಕೆ ಗಿಡ-ಗಂಟಿ ಅಡ್ಡಿ!

16-bidadi-2 (1)
Published on

* ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ನಲ್ಲಿ ಬೆಳೆದ ಕುರುಚಲು

* ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆ

ಚೇತನ್ ಚಕ್ಕೆರೆ ಬಿಡದಿ

ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮೇಲೆ ಗಿಡ-ಗಂಟಿ, ಕುರುಚಲು ಹುಲ್ಲು ಬೆಳೆದು ರಸ್ತೆ ಯಾವುದು, ಡಿವೈಡರ್ ಯಾವುದು ಎಂಬುದೇ ತಿಳಿಯದಂತಾಗಿದೆ.

ಹೌದು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (275) ಬಿಡದಿ ಮೂಲಕ ಹಾದು ಹೋಗಿದೆ. ಹೃದಯ   ಭಾಗದಲ್ಲೇ ರಸ್ತೆಯ ಡಿವೈಡರ್‌ಗಳ ಮೇಲೆಯೇ ಗಿಡ-ಗಂಟಿ ಬೆಳೆದಿವೆ. ಒಂದು ಕಡೆಯಿಂದ ಮತ್ತೊಂದು ಕಡೆಯ ರಸ್ತೆ ಕಾಣದಂತಾಗಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ಸಂಚಾರಕ್ಕೆ ಅಡ್ಡಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿನ ರಸ್ತೆ ವಿಭಜಕಕ್ಕೆ ವಾಹನಗಳು ಅಡ್ಡಾದಿಡ್ಡಿ ಸಂಚಾರ ಮಾಡಬಾರದೆಂದು ಕಬ್ಬಿಣದ ತಂತಿ ಬೇಲಿ ಹಾಕಲಾಗಿದೆ. ಈ ವಿಭಜಕದ ತುಂಬೆಲ್ಲ ಗಿಡ-ಗಂಟಿ ಬೆಳೆದು ನಿಂತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಹೆಗ್ಗಡಗೆರೆ ಕ್ರಾಸ್‌ನಿಂದ ಕಾಡುಮನೆ ಕ್ರಾಸ್‌ವರೆಗೆ ರಸ್ತೆಯ ವಿ‘ಜಕದಲ್ಲಿ ಗಿಡ ಹಾಗೂ ವಿವಿಧ ಜಾತಿಯ ಹುಲ್ಲು ಬೆಳೆದು ನಿಂತಿವೆ.

ಹೆದ್ದಾರಿಯಲ್ಲಿನ ರಸ್ತೆ ಸರಿಯಾದ ನಿರ್ವಹಣೆ ಇಲ್ಲದೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಅಲ್ಲದೇ ಡಿವೈಡರ್ ಮಧ್ಯದಲ್ಲಿ ಅಲ್ಲಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಿಗೂ ಕೆಲವು ಬಳ್ಳಿಗಳು ಅಂಟಿಕೊಂಡು ಬೆಳೆದಿವೆ.

ಹೆದ್ದಾರಿಯ ಡಿವೈಡರ್ ಹಾಗೂ ಇಕ್ಕೆಲಗಳಲ್ಲಿ ಬೆಳೆದ ಗಿಡಗಳನ್ನು ಕತ್ತರಿಸಿ ಅದರ ನಿರ್ವಹಣೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳದು. ಆದರೆ ಇದನ್ನು ಮರೆತು ನಮಗೂ ರಸ್ತೆಗೂ ಸಂಬಂ‘ವಿಲ್ಲದಂತೆ ಅವರು ಕಣ್ಮುಚ್ಚಿ ಕುಳಿತಿದ್ದಾರೆ.

==

ದಿನೇಶ್, ಬೈಕ್ ಸವಾರ

ಬೆಂಗಳೂರು-ಮೈಸೂರು ಹೆದ್ದಾರಿಯ ಮಧ್ಯಭಾಗದ ಡಿವೈಡರ್‌ಗಳಿಗೆ ತಂತಿ ಬೇಲಿ ಹಾಕಲಾಗಿದೆ. ಇದರ ಎರಡು ಕಡೆ ವಿವಿಧ ಗಿಡ-ಗಂಟಿ, ಹುಲ್ಲು ಬೆಳೆದು ರಸ್ತೆಗೆ ಚಾಚಿದೆ. ರಸ್ತೆಯಲ್ಲಿ ಸಂಚಾರ ಮಾಡುವಾಗ ವಾಹನಗಳಿಗೆ ತಾಗುವುದು ಒಂದೆಡೆಯಾದರೆ, ಮತ್ತೊಂದೆಡೆ ರಸ್ತೆಯಲ್ಲಿ ಬರುವ ವಾಹನಗಳು ಕಾಣಿಸುವುದಿಲ್ಲ. ಬೈಕ್ ಸವಾರರು ಹೆದ್ದಾರಿಯಲ್ಲಿ ಸಂಚಾರ ಮಾಡಲು ಸಮಸ್ಯೆ ಉಂಟಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸಬೇಕಿದೆ.

ಲೋಹೀತ್ ಕುಮಾರ್, ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ 

ಹೆದ್ದಾರಿಯ ಡಿವೈಡರ್ ಮಧ್ಯ ಭಾಗದಲ್ಲಿ ಗಿಡಗಳು ಬೆಳೆದಿದ್ದು, ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಬಗ್ಗೆ ಪುರಸಭೆಗೆ ಸಾರ್ವಜನಿಕರಿಂದ ದೂರು ಬಂದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆದು ಗಿಡಗಳನ್ನು ಕತ್ತರಿಸಿ ಸ್ವಚ್ಛ ಮಾಡುವಂತೆ ತಾಕೀತು ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net