ಶಿಕ್ಷಣದಿಂದ ಚಾರಿತ್ರೃ ನಿರ್ಮಾಣ: ಸಿದ್ದಲಿಂಗ ಶ್ರೀಗಳು

Swamiji_Prathiba
Published on

ತುಮಕೂರು: ಶಿಕ್ಷಣದ ಗುರಿ ಸರ್ಟಿಫಿಕೇಟ್ ಪಡೆಯುವುದಲ್ಲ. ಚಾರಿತ್ರೃ ನಿರ್ಮಾಣ ಎಂಬುದನ್ನು ನಾವೆಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.

ನಗರದ ಎಸ್‌ಐಟಿ ಬಿರ್ಲಾ ಸಭಾಂಗಣದಲ್ಲಿ ಭಾನುವಾರ ವೀರಶೈವ, ಲಿಂಗಾಯತ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಪ್ರಯತ್ನ, ಪರಿಶ್ರಮ, ವಿಶ್ವಾಸ ಈ ಮೂರು ಅಂಶಗಳು ನಿಮ್ಮನ್ನು ರೂಪಿಸಬಲ್ಲವು ಎಂದರು.

ಇಪ್ಪತ್ತೊಂದನೇ ಶತಮಾನ ಭಾರತೀಯರ ಯುಗ. ಜಗತ್ತಿನಲ್ಲಿ ಅತ್ಯಂತ ಸಶಕ್ತ ಯುವಜನತೆ ಹೊಂದಿರುವ ದೇಶ ನಮ್ಮದು. ಯುವ ಶಕ್ತಿಯು ಪ್ರತಿಭೆಯ ಜತೆಗೆ ಕೌಶಲ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಅಖಿಲಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.

ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವೆಯ ಶ್ರೀಕಾರದ ವೀರಬಸವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ-ಲಿಂಗಾಯತ ಸೇವಾ ಸಮಿತಿಯ ಅಧ್ಯಕ್ಷ ದರ್ಶನಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವೀಶ್, ಕಾರ್ಯಾಧ್ಯಕ್ಷ ಎಂ.ಎನ್.ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net