ವೀರಶೈವ ಧರ್ಮದ ಕೊಡುಗೆ ಅಪಾರ

6GKK1
Published on

ಗೋಕಾಕ: ಸನಾತನವಾದ ವೀರಶೈವ ಲಿಂಗಾಯತ ಧರ್ಮ ಸದಾ ಶಾಶ್ವತವಾಗಿ ಇರುವಂಥದ್ದಾಗಿದೆ. ಯಾವುದೇ ಕಾರಣಕ್ಕೂ ಅವನತಿ ಕಾಣದೇ ಅತ್ಯಂತ ಪ್ರಾಚಿನ ಧರ್ಮವಾಗಿದ್ದು, ಕೊಡುಗೆ ಅಪಾರವಾಗಿದೆ ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗತ್ಪಾದರು ಅಭಿಮತ ವ್ಯಕ್ತಪಡಿಸಿದರು.

ನಗರದ ಮಹಾಲ$್ಮ ಸಭಾಭವನದಲ್ಲಿ ಜಂಗಮ ೇಮಾಭಿವೃದ್ಧಿ ಸಂ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ಪ್ರವಚನ ಮಂಗಲೋತ್ಸವ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಾತಿ, ಲಿಂಗ ಭೇದವಿಲ್ಲದೆ ವೀರಶೈವ ಲಿಂಗಾಯತ ಧರ್ಮ ಸಾಮಾಜಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ಉನ್ನತಿ ಮಾರ್ಗ ಬೋಧಿಸುವ ಮೂಲಕ ಮಾನವಕುಲದ ಒಳಿತಿಗಾಗಿ ಶ್ರಮಿಸುತ್ತಿದೆ. ಎಲ್ಲ ವೀರಶೈವ ಲಿಂಗಾಯತ ಧರ್ಮದ ತಾಯಂದಿರು ಗರ್ಭ ಧರಿಸಿದ ಎಂಟನೇ ತಿಂಗಳಿನಲ್ಲಿ ಇಷ್ಟಲಿಂಗ ಗರ್ಭ ಸಂಸ್ಕಾರ ಪಡೆಯಬೇಕು. ಧರ್ಮ ಗುರುಗಳಿಂದ ಸಂಸ್ಕಾರ ಕೊಡಿಸಿ ಮಕ್ಕಳು ಸನ್ಮಾರ್ಗದಲ್ಲಿ ಸಾಗುವಂತೆ ಕಾಳಜಿ ವಹಿಸುವದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮದ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಎಲ್ಲರೂ ಓದುವ ಮೂಲಕ ಸುಸಂಸತವಂತರಾಗಬೇಕು ಎಂದರು.

ಲಂಡನ್​ನ ಪಂಚಸೂತ್ರ ಅಕಾಡೆಮಿ ಸಂಸ್ಥಾಪಕ ವಿಶ್ವಶೇಖರ ಗುರೂಜಿ ವೀರಶೈವ ಲಿಂಗಾಯತ ಧರ್ಮ ಹಾಗೂ ಇಷ್ಟಲಿಂಗ ಪೂಜೆ ಮಹತ್ವ ತಿಳಿಸಿದರು. ಪ್ರವಚನ ನೀಡಿದ ಹುಬ್ಬಳ್ಳಿಯ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಬೆಳಗ್ಗೆ ಜಂಗಮ ವಟುಗಳಿಗೆ ಅಯ್ಯಾಚಾರ ಮತ್ತು ಭಕ್ತರಿಗೆ ಲಿಂಗ ದೀೆ ನೆರವೇರಿಸಲಾಯಿತು. ಉಜ್ಜಯಿನಿಯ ಜಗದ್ಗುರುಗಳಿಗೆ ಪೂರ್ಣ ಕುಂಭದ ಸ್ವಾಗತ ಕೋರಲಾಯಿತು.

ಸ್ಥಳಿಯ ಶೂನ್ಯ ಸಂಪಾದನಮಠದ ಮುರುರಾಜೇಂದ್ರ ಸ್ವಾಮೀಜಿ, ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾರ್ಮಿಕ ಮುಖಂಡ ಅಂಬಿರಾವ್​ ಪಾಟೀಲ, ಅಶೋಕ ಪೂಜಾರಿ, ನಿಂಗಪ್ಪ ಕುರಬೇಟ್​, ಪ್ರಕಾಶ ಕಂಬಿ, ಈರಣ್ಣ ಹಿರೇಮಠ, ಪಂಚಾರಿ ಹೊಸಟ್ಟಿಮಠ, ಸಂಗಮೇಶ ಗುಡದೂರಕಲ್ಮಠ, ಡಾ.ಪ್ರವಿಣ ಕೆಳಗಿನಮಠ, ಸೋಮಶೇಖರ ಹಿರೇಮಠ, ದೇವು ಬೆಳಂಕಿಮಠ, ವೀರೇಂದ್ರ ಹಿರೇಮಠ ಇತರರಿದ್ದರು. ಎಸ್​.ಕೆ.ಮಠದ ನಿರೂಪಿಸಿದರು. ಸೇವಂತಾ ಮುಚ್ಚಂಡಿ ಹಿರೇಮಠ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net