ವೀರಾಂಜನೇಯ ದೇಗುಲ ಹುಂಡಿ ಕಳುವು

Published on

ಕುದೂರು: ಹೋಬಳಿಯ ಕಾಗಿಮಡು ಗೇಟ್​ ಬಳಿಯ ಅಭಯ ವೀರಾಂಜನೇಯ ದೇಗುಲದ ಹುಂಡಿ ಗುರುವಾರ ರಾತ್ರಿ ಕಳ್ಳತನವಾಗಿದೆ. ದೇಗುಲ ಬಾಗಿಲು ಬೀಗ ಮುರಿದ ಕಳ್ಳರು, ಹುಂಡಿಯಲ್ಲಿದ್ದ ಅಂದಾಜು 30 ಸಾವಿರ ರೂ. ದೊಚಿ, ಹುಂಡಿಯನ್ನು ದೇವಸ್ಥಾನದ ಪಕ್ಕದ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾರೆ. ಗ್ರಾಮದ ಬಾಳೆ ತೋಟಗಳಲ್ಲಿ ಬಾಳೆಗೊನೆಗಳ ಕಳ್ಳತನವೂ ಹಲವು ದಿನಗಳಿಂದ ನಡೆಯುತ್ತಿದ್ದು, ರಾತ್ರಿ ಪೊಲೀಸ್​ ಗಸ್ತು ಹೆಚ್ಚಿಸಿ, ಕಳ್ಳರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net