ವೀರಮಂಗಲ ಪಿಎಂಶ್ರೀ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ : ದಸರಾ ಕ್ರೀಡಾಕೂಟದ ಯೋಗ ಸ್ಪರ್ಧೆ

viramangala
Published on

ಪುತ್ತೂರು: ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಗುರುವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಮೈಸೂರು ದಸರಾ ಕ್ರೀಡಾಕೂಟದ ಯೋಗ ಸ್ಪರ್ಧೆಯಲ್ಲಿ, ವೀರಮಂಗಲದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರು ಮಂದಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವೀರಮಂಗಲ ಪಿಎಂಶ್ರೀ ಶಾಲೆಯ ವಿದ್ಯಾರ್ಥಿಗಳಾದ ಚಿಂತನಾ, ಶ್ರೀದೇವಿ, ವರ್ಷಾ, ಪ್ರತೀಕ್ಷಾ, ಇಶಾನಿ ಮತ್ತು ಚಿರಾಗ್ ಸಾಧಕರು ಎಂದು ಶಾಲೆಯ ಮುಖ್ಯ ಶಿಕ್ಷಕ ತಾರಾನಾಥ ಸವಣೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net