

ಕನಕಗಿರಿ: ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ವೀರಭದ್ರೇಶ್ವರ ಸೇವಾ ಟ್ರಸ್ಟ್ ಹಾಗೂ ಗ್ರಾಮಸ್ಥರಿಂದ ಶ್ರಾವಣ ಮಾಸದ ನಿಮಿತ್ತ ವೀರಭದ್ರೇಶ್ವರ ಗುಗ್ಗಳ ಸೇವಾ ಕಾರ್ಯ ಮಂಗಳವಾರ ಜರುಗಿತು.
ಇದನ್ನೂ ಓದಿ: ಅಖಂಡ ಭಾರತ ನಿರ್ಮಾಣಕ್ಕಾಗಿ ಪಂಜಿನ ಮೆರವಣಿಗೆ
ಬೆಳಗ್ಗೆ ಹಳ್ಳದಲ್ಲಿ ಗಂಗೆಸ್ಥಳ ಪೂಜೆ, ಗುಗ್ಗಳ, ಕುಂಭಾಭಿಷೇಕ, ರುದ್ರಾಭಿಷೇಕ ಜರುಗಿತು. ಹೊಸ ಗ್ರಾಪಂ ಕಚೇರಿಯಿಂದ ವೀರಭದ್ರೇಶ್ವರ ದೇವಸ್ಥಾನದವರಗೆ ಮೆರವಣಿಗೆ ಮಾಡಲಾಯಿತು. ಗಂಗೆಸ್ಥಳದ ಗುಗ್ಗಳದಲ್ಲಿ ಕನಕಗಿರಿ, ಗಂಗಾವತಿ, ಚನ್ನಳ್ಳಿ, ಹರಿಹರ, ಕಲಬುರ್ಗಿ ಸೇರಿ ಗ್ರಾಮದ ನೂರಾರು ಭಕ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ಕರಿಯಪ್ಪ ತಾತ ಗಂಗೆಸ್ಥಳ ಮೆರವಣಿಗೆ
ಗ್ರಾಪಂ ಸದಸ್ಯ ಮಹಾಂತೇಶ ದಾಸನಾಳ, ಪ್ರಮುಖರಾದ ಬಸವರಾಜ ಬೂಸಾರಿ, ಶೇಖರಪ್ಪ ಭಾವಿಕಟ್ಟಿ, ಮಹಾಂತೇಶ ಬಾವಿಕಟ್ಟಿ, ಜಗದೀಶ ಅಂಗಡಿ, ಶರಣಪ್ಪ ಅಂಗಡಿ, ವಿರುಪಣ್ಣ ಮಾಲಿ, ಮಲ್ಲಿಕಾರ್ಜುನ ರೊಟ್ಟಿ, ಪ್ರಕಾಶ ಅಕ್ಕಿ, ಡಾ.ಶಿವಾನಂದ, ಮಲ್ಲಿಕಾರ್ಜುನ ಪವಾಡಶೆಟ್ಟಿ, ಪಂಪನಗೌಡ ಪೊ.ಪಾ., ರೇವಣ ಸಿದ್ದಯ್ಯ ಸಂಡೂರು, ವೀರೇಶ ಅಂಗಡಿ ಇತರರಿದ್ದರು.