ಅಖಂಡ ಭಾರತ ನಿರ್ಮಾಣಕ್ಕಾಗಿ ಪಂಜಿನ ಮೆರವಣಿಗೆ

bjp
ಚಿಕ್ಕಮಗಳೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು. ಎಂ.ಆರ್.ದೇವರಾಜ ಶೆಟ್ಟಿ, ರಂಗನಾಥ್, ಬಿ.ರಾಜಪ್ಪ, ಕುರುವಂಗಿ ವೆಂಕಟೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಿ ಅಖಂಡ ಭಾರತ ನಿರ್ಮಾಣವಾಗಬೇಕು ಎಂದು ಸಂಕಲ್ಪ ಮಾಡಿದರು.

ನಗರದ ಓಂಕಾರೇಶ್ವರ ದೇವಸ್ಥಾನದ ಆವರಣದಿಂದ ಪಂಜಿನ ಮೆರವಣಿಗೆ ಆರಂಭಿಸಿದ ನೂರಾರು ಕಾರ್ಯಕರ್ತರು ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಸಿದರು.

1947ರ ಆಗಸ್ಟ್ 14ರಂದು ಅಖಂಡ ಭಾರತ ತ್ರಿಖಂಡವಾಗಿ ವಿಭಜನೆಯಾಯಿತು. ಈ ದಿನ ಭಾರತೀಯರ ಪಾಲಿಗೆ ಕರಾಳ ದಿನ. ಮತ್ತೆ ಭಾರತ ಅಖಂಡ ಭಾರತವಾಗಬೇಕು. ಇದಕ್ಕಾಗಿ ಪ್ರತಿಯೊಬ್ಬ ಭಾರತೀಯರು ಸಂಕಲ್ಪ ಮಾಡಬೇಕು. ಇದೇ ಕಾರಣದಿಂದಾಗಿ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಗುತ್ತಿದೆ ಎಂದು ವಿವಿಧ ಘೋಷಣೆಗಳನ್ನು ಪಂಜಿನ ಮೆರವಣಿಗೆಯುದ್ದಕ್ಕೂ ಕೂಗಿದರು.

ಪಂಜಿನ ಮೆರವಣಿಗೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ, ಹಿಂದೂಪರ ಸಂಘಟನೆಗಳ ಮುಖಂಡರಾದ ರಂಗನಾಥ್, ಶ್ಯಾಮ್ ವಿ. ಗೌಡ, ಪ್ರಮುಖರಾದ ಬಿ.ರಾಜಪ್ಪ, ಕುರುವಂಗಿ ವೆಂಕಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net