ಸಂಯುಕ್ತಾ ಪಾಟೀಲ್ ನಾಮಪತ್ರದಲ್ಲಿ 'ಕೈ' ಹಿರಿಯ ನಾಯಕರು ಮಿಂಚಿಂಗ್​! ಕಡೆಗೂ ತಂಗಿಗೆ ಸಿಕ್ತು ಅಕ್ಕನ ಸಾಥ್​

WhatsApp Image 2024-04-19 at 4.26.17 PM
Published on

ಬಾಗಲಕೋಟೆ: ಲೋಕಸಭಾ ಚುನವಾಣೆ 2024ರ ಕಾವು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಸದ್ಯ ಬಾಗಲಕೋಟೆ ಕ್ಷೇತ್ರದಲ್ಲಿ ಯಾರಿಗೆ ಅಧಿಕಾರ ಪಟ್ಟ ಸಿಗಲಿದೆ ಎಂಬುದೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಮತ್ತು ಜನರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಒಂದೆಡೆ ಬಿಜೆಪಿಯಿಂದ ಪಿ.ಸಿ. ಗದ್ದಿಗೌಡರು ಕಣಕ್ಕಿಳಿದರೆ, ಮತ್ತೊಂದೆಡೆ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ್ ಸಖತ್ ಟಕ್ಕರ್ ಕೊಡಲು ಅಖಾಡದಲ್ಲಿದ್ದಾರೆ.

ಇಂದು ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಯುಕ್ತಾ ಪಾಟೀಲ್ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಟಿಕೆಟ್​ ವಂಚಿತೆ, ಬಹಳ ದಿನಗಳಿಂದ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಕಡೆಗೂ ಮುನಿಸು ಮುರಿದು ಪತಿಯೊಂದಿಗೆ ಸಂಯುಕ್ತಾ ಪರ ಬ್ಯಾಟ್ ಬೀಸಿದ್ದಾರೆ.

ಸಂಯುಕ್ತಾ ಪಾಟೀಲ್ ನಾಮಪತ್ರ ಸಲ್ಲಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಮಾಜಿ ಸಚಿವ ಎಸ್. ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ಸಚಿವರಾದ ಸತೀಶ್ ಜಾರಕಿಹೊಳಿ, ಆರ್.ಬಿ. ತಿಮ್ಮಾಪುರ, ಶಾಸಕರಾದ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ ಭಾಗಿಯಾಗಿ ಸಂಯುಕ್ತಾ ಪರ ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ. ವೀಣಾ ಮತ್ತು ಸಂಯುಕ್ತಾ ವಿರುದ್ಧ ಇದ್ದ ಮುನಿಸು ಇದೀಗ ಶಮನಗೊಂಡಿದ್ದು, ಇದು ವೀಣಾ ಅಭಿಮಾನಿಗಳಲ್ಲಿ ಭಾರೀ ಸಂತಸಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net