

ಮಧೂರು: ಸಶಕ್ತ ಸಾಮಾಜದ ಬುನಾದಿಯೇ ವೈದಿಕ ಪರಂಪರೆ. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿ ನಿತ್ಯ ಕರ್ಮಾನುಷ್ಠಾನಗಳ ತಿಳಿವಳಿಕೆ ಅತ್ಯಗತ್ಯ ಎಂದು ತಂತ್ರಿ ಬಿ.ಕೇಶವ ಆಚಾರ್ಯ ಹೇಳಿದರು.
ಉಳಿಯತ್ತಡ್ಕದಲ್ಲಿ ವೈದಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗುರುಕೃಪಾ ವೈದಿಕ ಶಿಕ್ಷಣ ಸಮಿತಿ ಆಯೋಜಿಸಿದ 22ನೇ ವರ್ಷದ ವೈದಿಕ ಶಿಕ್ಷಣ ಶಿಬಿರ ಇದಾಗಿದೆ.
ನೆಲ್ಲಿಸ್ಥಳ ಶ್ರೀ ಕಾಳಿಕಾಂಬಾ ದೇವಳದ ಅಧ್ಯಕ್ಷ ಸುಂದರ ಆಚಾರ್ಯ ಕೋಟೆಕ್ಕಾರು, ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ವೆಂಕಟರಮಣ ಆಚಾರ್ಯ ಉಳುವಾರು, ಸಮಿತಿ ಮಾಜಿ ಅಧ್ಯಕ್ಷ ರಾಮಕೃಷ್ಣ ಆಚಾರ್ಯ, ಕಾರ್ಯದರ್ಶಿ ರವೀಂದ್ರ ಆಚಾರ್ಯ, ಸಿವಿಲ್ ಇಂಜಿನಿಯರ್ ಪ್ರಾಣೇಶ್ ತಲಪ್ಪಾಡಿ ಉಪಸ್ಥಿತರಿದ್ದರು.
ಭರತ್ಕುಮಾರ್ ಸ್ವಾಗತಿಸಿ, ಹರಿಪ್ರಸಾದ್ ಶರ್ಮ ವಂದಿಸಿ, ಕಿರಣ್ ಶರ್ಮಾ ನಿರೂಪಿಸಿದರು. ಶಿಬಿರದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.