ಕಾರಿನಲ್ಲಿ ಸಾಗಿಸುತ್ತಿದ್ದ ಮದ್ಯ ವಶ

Liquer Bottle
Published on

ಕಾಸರಗೋಡು: ಕುಂಬಳೆ ಸನಿಹ ಅಬಕಾರಿ ಎನ್‌ಫೋರ್ಸ್‌ಮೆಂಟ್ ಆ್ಯಂಡ್ ಆ್ಯಂಟಿ ನಾರ್ಕೋಟಿಕ್ ಸ್ಪೆಶ್ಯಲ್ ಸ್ಕ್ವೇಡ್ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ನಾಸಗಿಸುತ್ತಿದ್ದ 337ಲೀ. ವಿದೇಶಿ ಮದ್ಯ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ಮೀಂಜ ಕುಳೂರು ಚಾರ್ಲ ನಿವಾಸಿ ವಿನೀತ್ ಶೆಟ್ಟಿ ಹಾಗೂ ಚಿಗುರುಪಾದೆ ನಿವಾಸಿ ಸಂತೋಷ್ ಬಂಧಿತರು. ಮದ್ಯ ಸಾಗಾಟಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಕರ್ನಾಟಕ ಭಾಗದಿಂದ ಕಾಸರಗೋಡು ಭಾಗಕ್ಕೆ ಮದ್ಯ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ತಂಡ ತಲಪ್ಪಾಡಿಯಿಂದಲೇ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಆರಿಕ್ಕಾಡಿಯಲ್ಲಿ ಕಾರನ್ನು ಸಾಹಸಕರ ರೀತಿಯಲ್ಲಿ ತಡೆದು ತಪಾಸಣೆ ನಡೆಸಿದಾಗ ಹಿಂಭಾಗದ ಸೀಟಿನಡಿ 216ಲೀ. ಮದ್ಯ ಹಾಗೂ 121ಲೀ. ಗೋವಾ ಮದ್ಯ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net